Ad Widget

ಸುಳ್ಯ ಶ್ರೀ ಚೆನ್ನಕೇಶವ ಜಾತ್ರೋತ್ಸವ

. . . . . . . . .

ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಜ.3 ರಿಂದ ಪ್ರಾರಂಭಗೊಂಡಿದ್ದು ಜ.13 ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಕೆ.ಯು.ಪದ್ಮನಾಭ ತಂತ್ರಿಗಳವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಡಿ.28 ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಜ.03 ರಂದು ಉಗ್ರಾಣ ತುಂಬಿಸಲಾಯಿತು.

ಸಂಜೆ ಪನ್ನೆಬೀಡು ನಾಲ್ಕು ದೈವಗಳ ಚಾವಡಿಯಿಂದ ಬಲ್ಲಾಳರ ಪಯ್ಯೋಳಿ ತರಲಾಯಿತು. ರಾತ್ರಿ ಕುಕ್ಕನ್ನೂರು ದೈವಗಳ ಭಂಡಾರ ಬಂದ ಬಳಿಕ ಧ್ವಜಾರೋಹಣ ನಡೆಯಿತು. ಜ.05 ರಂದು ಬೆಳಿಗ್ಗೆ ಪನ್ನೆಬೀಡು ಶ್ರೀ ಭಗವತಿ ಸ್ಥಾನದಲ್ಲಿ ಪ್ರತಿಷ್ಠಾ ದಿನ ಮಹಾಪೂಜೆ ನಡೆಯಿತು. ಜ.07 ರಂದು ಸಂಸ್ಕಾರ ದೀಪಿಕೆ,ಸುಳ್ಯ ಶ್ರೀ ಚೆನ್ನಕೇಶವ ದೇವಾಲಯ ಇಲ್ಲಿನ ವಿದ್ಯಾರ್ಥಿಗಳಿಂದ ಭಗವದ್ಗೀತಾ ಪಠಣ ಮತ್ತು ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು.

ಸಾಯಂಕಾಲ “ಸುಳ್ಳೋತ್ಸವ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜ.08 ರಂದು ರಾತ್ರಿ ಶ್ರೀ ದೇವರ ಉತ್ಸವ ಬಲಿ ಪ್ರಾರಂಭಗೊಂಡಿತು.

ಜ.09 ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ,ನಡುಬೆಳಗು,ಬಟ್ಟಲು ಕಾಣಿಕೆ ನಡೆಯುತ್ತಿದ್ದು, ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ, ವಿವೇಕಾನಂದ ವೃತ್ತ ಹಳೆಗೇಟು,ಹೊಸಗದ್ದೆ,ಹಳೆಗೇಟು ಕಟ್ಟೆ,ಸಮೃತಭವನ, ರಾಮಮಂದಿರ, ಜಟ್ಟಿಪಳ್ಳ ಕಟ್ಟೆ ಪೂಜೆಗಳು ನಡೆಯಲಿದೆ. ಜ.10ರಂದು ಬೆಳಿಗ್ಗೆ ಅಜ್ಜಾವರ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ,ರಾತ್ರಿ ಮಿತ್ತೂರು ದೈವಗಳ ಭಂಡಾರ ಬರುವುದು,ಕಾನತ್ತಿಲ ದೈವಗಳ ಭಂಡಾರ ಬರುವುದು, ವಾಲಸಿರಿ ಉತ್ಸವ ನಡೆಯುವುದು.

ಜ.11ರಿಂದ ಬೆಳಿಗ್ಗೆ ದೊಡ್ಡ ದರ್ಶನ ಬಲಿ,ಬಟ್ಟಲು ಕಾಣಿಕೆ ನಡೆಯಲಿದೆ. ರಾತ್ರಿ ಕಲ್ಕುಡ ದೈವಗಳ ಭಂಡಾರ ಬರುವುದು ಬಳಿಕ ರಥೋತ್ಸವ ನಡೆಯಲಿದೆ.

ಜ.12 ರಂದು ಬೆಳಿಗ್ಗೆ ಆರಾಟ ಬಾಗಿಲು ತೆರೆಯುವುದು,ನಂತರ ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಭಾರದ್ವಾಜಾಶ್ರಮ ಅರಂಬೂರು ವೇದ ಪಾಠಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ,ಮದ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಬಜಪ್ಪಿಲ ದೈವಗಳ ಭಂಡಾರ ಬರುವುದು,ಉತ್ಸವ ಬಲಿ ಹೊರಟು ಪಟ್ಟಣ ಸವಾರಿ,ಆರಕ್ಷಕ ಠಾಣಾ ಕಟ್ಟೆಯಿಂದ ಗಾಂಧಿನಗರ,ಅರಣ್ಯ ಇಲಾಖೆ,ಕೇರ್ಪಳ,ತಾಲೂಕು ಕಚೇರಿ,ಪಯಸ್ವಿನಿ ನದಿ ಬಳಿ ಕಟ್ಟೆ ಪೂಜೆಗಳು,ಅವಚ್ಛತ ಸ್ನಾನವಾಗಿ ಬಂದು ದರ್ಶನ ಬಲಿ,ಬಟ್ಟಲು ಕಾಣಿಕೆ,ಧ್ವಜಾವರೋಹಣ ನಡೆಯಲಿದೆ.ಜ.13 ರಂದು ಮಧ್ಯಾಹ್ನ ಸಂಪ್ರೋಕ್ಷಣೆ,ಮಂತ್ರಾಕ್ಷತೆ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!