
ಸುಳ್ಯ ಸಮೀಪದ ಅರಂಬೂರು ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅರಂಬೂರಿನಲ್ಲಿ ಅಪಘಾತ ನಡೆದ ಸಂದರ್ಭದಲ್ಲಿ ಪೆರಾಜೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸ್ವೀಪ್ ಬಿಲ್ಡರ್ಸ್ ನ ತಾಜುದ್ದೀನ್ ಜಟ್ಟಿಪಳ್ಳ ರವರು ಮತ್ತು ಜಸೀರ್ ರವರು ಗಾಯಗೊಂಡವರನ್ನು ತಮ್ಮ ಪಿಕಪ್ ವಾಹನದಲ್ಲಿ ನಲ್ಲಿ ಸುಳ್ಯ ಸರಕಾರಿ ಅಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದರು. ಕಾರು ಚಾಲಕನನ್ನು ಸುಳ್ಯದ ಅಂಬ್ಯುಲೆನ್ಸ್ ಚಾಲಕ ಸಿದ್ದೀಕ್ ರವರು ಅಸ್ಪತ್ರೆಗೆ ತಂದರು. ಬೈಕ್ ಸವಾರರು ಕೂಲಿ ಕಾರ್ಮಿಕರಾದ ಶಿವಪ್ಪ ಮತ್ತು ಮೈಲಾರಿ ಎಂದು ತಿಳಿದು ಬಂದಿದೆ. ಗದಗ ಮೂಲದ ಕಾರ್ಮಿಕರಲ್ಲಿ ಓರ್ವನ ಕಾಲು ಮತ್ತು ಮತ್ತೋರ್ವನ ಸೊಂಟಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ಕಾರು ಚಾಲಕ ಮತ್ತು ಮತ್ತೋರ್ವರಿಗೆ ಮೂಗಿಗೆ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಗದಗ ಮೂಲದ ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.