
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಪ್ರಥಮ ಬಿಬಿಎ ವಿದ್ಯಾರ್ಥಿ ವಿನೀತ್ ಕೆ ಇವರು ಎಸ್ಎಂಎಸ್ ಕಾಲೇಜ್ ಬ್ರಹ್ಮಾವರದಲ್ಲಿ ಜ.7ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜ್ ಮಟ್ಟದ ದೇಹದಾಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಇವರು ಪುತ್ತೂರಿನ ನೆಹರು ನಗರದ ನರೇಶ್ ಕೆ ಹಾಗೂ ಶ್ರೀಮತಿ ಸುಮಿತ್ರ ಇವರ ಪುತ್ರರಾಗಿರುತ್ತಾರೆ.
