
ಎಡಮಂಗಲ ಗ್ರಾಮದ ನಡುಮನೆ ಎಂಬಲ್ಲಿ ಅಸ್ತಿ ಪಂಜರ ಪತ್ತೆ ಯಾಗಿದೆ. ಸ್ಥಳೀಯ ಮನೆಯ ಕೆಲಸದ ಆಳುಗಳು ಸೊಪ್ಪು ತರಲು ಹೋದಾಗ ಮನುಷ್ಯನ ಅಸ್ತಿ ಪಂಜರ ಕಂಡು ವಿಷಯ ತಿಳಿಸಿದರೆನ್ನಲಾಗಿದೆ. ವಿಷಯ ತಿಳಿದ ಮನೆಯವರು ಬೆಳ್ಳಾರೆ ಪೋಲೀಸ್ ಇಲಾಖೆಗೆ ಮಾಹಿತಿ ತಿಳಿಸಿ, ಪೋಲೀಸರು ಆಗಮಿಸಿ ಅನಾಥ ಅಸ್ತಿ ಪಂಜರ ತನಿಖೆ ನಡೆಸುತ್ತಿದ್ದಾರೆ. ಮರದಲ್ಲಿ ಕತ್ತಿ ಕಂಡುಬಂದಿದ್ದು, ಸುಮಾರು 6 ತಿಂಗಳ ಹಿಂದೆ ಮರಕೆಸು ಕೊಯ್ಯಲು ಹೋದ ವ್ಯಕ್ತಿ ಮೃತಪಟ್ಟಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.