ರಾಷ್ಟ್ರದಾದ್ಯಂತ ಸಂಭ್ರಮದಲ್ಲಿ ಅಯೋಧ್ಯಪುರ ವಾಸಿ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಟೆಯು ಜನವರಿ ೨೨ ರಂದು ನಡೆಯಲಿದ್ದು ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಪ್ರತಿ ಮನೆಗೆ ಅಕ್ಷತೆ ಮತ್ತು ಆಮಂತ್ರಣ ಪತ್ರಿಕೆಯನ್ನು ನಿರಂತರವಾಗಿ ೧ ತಿಂಗಳುಗಳ ಕಾಲ ಪೂಜಿಸಿ ಮನೆಮನೆಗೆ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲ ಇದರ ನೇತೃತ್ವದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ, ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ, ಸಿ ಎ ಬ್ಯಾಂಕ್ ನಿರ್ದೇಶಕರಾದ ವಿಕ್ರಂ ಅಡ್ಪಂಗಾಯ, ಚನಿಯ ಕಲ್ತಡ್ಕ, ಶಿವಪ್ರಕಾಶ್ ಅಡ್ಪಂಗಾಯ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.