Ad Widget

ಬ್ಯಾನರ್ ಹರಿದ ಪ್ರಕರಣ ಆರೋಪಿಗಳ ತಕ್ಷಣ ಬಂಧಿಸಲು ಸುಳ್ಯ ವೃತ್ತ ನಿರೀಕ್ಷಕರಿಗೆ ಸೂಚಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ.

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಬ್ಯಾನರನ್ನು ಸುಳ್ಯ ಪೇಟೆಯಲ್ಲಿ ಕಿಡಿಗೇಡಿಗಳು ಹಾನಿ ಮಾಡಿರುವ ಬಗ್ಗೆ ಮಾನ್ಯ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುಳ್ಯ ವೃತ್ತ ನಿರೀಕ್ಷಕ ರೊಂದಿಗೆ ಮಾತನಾಡಿ ಸಮಾಜದಲ್ಲಿ ಅಶಾಂತಿ ಕದಡಲು ಯತ್ನಿಸುತ್ತಿರುವ ಶಕ್ತಿಗಳನ್ನು ನಿಗ್ರಹಿಸಿ ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಹಾಗು ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಪೊಲೀಸರು ರಾತ್ರಿ ಗಸ್ತು ಅನ್ನು ಹೆಚ್ಚಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.

. . . . .

ನೀವು ಬ್ಯಾನರ್ ಹರಿಯಬಹುದು, ಹಿಂದೂಗಳ ವಿಶ್ವಾಸವನ್ನಲ್ಲ – ಸುಳ್ಯ ಬಿಜೆಪಿ ಮಂಡಲ.

ಇತ್ತೀಚೆಗೆ ಸುಳ್ಯದಲ್ಲಿ ಕಿಡಿಗೇಡಿಗಳು ಅಯೋಧ್ಯಾ ರಾಮ ಮಂದಿರ ಲೋಕಾರ್ಪಣೆಯ ಬ್ಯಾನರ್ ಹರಿದದ್ದು ಹೇಡಿತನದ ಕೆಲಸ, ಮಾತ್ರ ಅಲ್ಲ ಇದಕ್ಕೆ ಕಾಂಗ್ರೆಸ್ ನ ಬಿ ಕೆ ಹರಿಪ್ರಸಾದ್ ರಂತಹ ಹಿಂದೂ ವಿರೋಧಿ ನಾಯಕರ ಹೇಳಿಕೆಯೇ ಪ್ರೇರಣೆ.

ನೀವು ಒಂದು ಬ್ಯಾನರ್ ಹರಿದಿರಬಹುದು ಆದರೆ ಹಿಂದೂ ಸಮಾಜ ನಿಮಗೆ ತಕ್ಕ ಉತ್ತರ ನೀಡಲಿದೆ.

ಪ್ರತಿಯೊಬ್ಬ ಸ್ವಾಭಿಮಾನಿ ಹಿಂದೂ ಬಂಧು ತಮ್ಮ ತಮ್ಮ ಶಕ್ತಿಗೆ ಅನುಸರವಾಗಿ ಅಯೋಧ್ಯಾ ರಾಮ ಮಂದಿರದ ಹೊಸ ಹೊಸ ಬ್ಯಾನರ್ ಗಳನ್ನು ಸುಳ್ಯ ದಾದ್ಯಂತ ಹಾಕಬೇಕಾಗಿ ಸುಳ್ಯ ಮಂಡಲ ಬಿಜೆಪಿ ಕರೆ ಕೊಡುತ್ತಿದ್ದೇವೆ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ತಿಳಿಸಿದೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!