Ad Widget

ಸುಳ್ಯದಲ್ಲಿ ಹರಿದ ಬ್ಯಾನರ್ ಪ್ರಕರಣ ; ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ! ಯುವ ಮೋರ್ಚಾ ಖಂಡನೆ

ಸುಳ್ಯದಲ್ಲಿ ಕೆಲವು ಕಿಡಿಗೇಡಿಗಳು ರಾಮ ಮಂದಿರ ಲೋಕಾರ್ಪಣೆ ಬ್ಯಾನರ್ ಹರಿದದ್ದು ಅತ್ಯಂತ ಆತಂಕದ ವಿಷಯ.. ಇದನ್ನು ಯುವ ಮೋರ್ಚಾ ಖಂಡಿಸುತ್ತದೆ

ಹಲವಾರು ವರ್ಷಗಳ ಸತತ ಹೋರಾಟದ ನಂತರ ಅಯೋಧ್ಯೆಯಲ್ಲಿ ಈಗ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ… ಅದಕ್ಕೆ ಇಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ.

ಅಂಥವರನ್ನು ಪೊಲೀಸ್ ಇಲಾಖೆ ಶೀಘ್ರದಲ್ಲಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು.

ನೆನಪಿಡಿ, ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ. ಹಿಂದೂಗಳು ಕಾನೂನಿಗೆ ಬೆಲೆ ಕೊಡುತ್ತಾರೆ.


ಕೈಲಾಗದವ ಮೈ ಪರಚಿಕೊಂಡ ಅನ್ನುವ ಹಾಗೆ ನೀವು ಒಂದು ಬ್ಯಾನರ್ ಹರಿಯಬಹುದು, ಇನ್ನೂ ನೂರು ಬ್ಯಾನರ್ ಹಾಕುವ ಶಕ್ತಿ ನಮಗಿದೆ. ಬಿಜೆಪಿ ಯುವ ಮೋರ್ಚಾ ಸದಾ ರಾಮನ ಮತ್ತು ರಾಮ ಭಕ್ತರ ಪರವಾಗಿ ನಿಲ್ಲುತ್ತದೆ ಸುನಿಲ್ ಕೇರ್ಪಳ ಪ್ರಧಾನ ಕಾರ್ಯದರ್ಶಿ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ತಿಳಿಸಿದ್ದಾರೆ

. . . . .

.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!