ಸುಳ್ಯದ ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಇಂದು ಮುಂಜಾನೆ ಕೆಲ ದಿನಗಳ ಹಿಂದೆ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣ ಬೆಳಕಿಗೆ ಬಂದಿದ್ದು ಈ ಕುರಿತಂತೆ ಹಿಂದು ಸಂಘಟನೆಯ ನಾಯಕರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಡಿಗೇಡಿಗಳು ಹರಿದ ಬ್ಯಾನರ್ ತುಂಡು ವಿವೇಕಾನಂದ ವೃತ್ತದ ಬಳಿಯಲ್ಲಿ ಸಂಜೆ ವೇಳೆಗೆ ಪತ್ತೆಯಾದ ಘಟನೆ ವರದಿಯಾಗಿದೆ. ಈ ಬ್ಯಾನರ್ ತುಂಡು ಪತ್ತೆಯಾಗುತ್ತಿದ್ದಂತೆ ಅದನ್ನು ಸ್ಥಳೀಯ ಯುವಕನೋರ್ವ ಫೋಟೋ ತೆಗೆದು ರಾಮ ಮಂದಿರದ ಸುಳ್ಯ ನಗರದ ವ್ಯಾಟ್ಯಾಪ್ ಗ್ರೂಪ್ ಗೆ ಹಾಕಿದ್ದಾನೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಪೋಟೋ ಹರಿದಾಡಿದೊಡನೆ ಕಪ್ಪು ಬಣ್ಣದ ಬೈಕ್ ನಲ್ಲಿ ಬಂದವರು ಅದನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಬ್ಯಾನರ್ ತುಂಡು ಪತ್ತೆ ಜತೆಗೆ ನಾಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಪೋಲಿಸ್ ಅಲರ್ಟ್ ಆಗಿದ್ದು ಹಲವರನ್ನು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಆಟೋ ಹಾಗೂ ಹಿಂದುಪರ ಸಂಘಟನೆಗಳ ತುರ್ತು ಸಭೆ – ನಾಳೆ 10 ಗಂಟೆಗೆ ಪ್ರತಿಭಟನೆಗೆ ಸಿದ್ಧತೆ
ಇತ್ತ ಬ್ಯಾನರ್ ಹರಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹಿಂದು ಪರ ಮತ್ತು ಆಟೋ ಚಾಲಕ ಮಾಲಕರ ಸಂಘವು ಗರಂ ಆಗಿದ್ದು , ತುರ್ತು ಸಭೆ ಸೇರಿ ಕೆಲವು ನಿರ್ಣಯಗಳನ್ನು ಮಾಡಿರುವುದಾಗಿ ತಿಳಿದುಬಂದಿದೆ. ಪೋಲೀಸ್ ಇಲಾಖೆಯು ನಾಳೆ ಮುಂಜಾನೆ 10 ಗಂಟೆಯ ಒಳಗಾಗಿ ಆರೋಪಿಯನ್ನು ಪತ್ತೆ ಹಚ್ಚದೆ ಇದ್ದಲ್ಲಿ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.