ಫೆ.25 ರಿಂದ 28 ರ ತನಕ ಸುಳ್ಯದ ಶ್ರೀ ರಾಮ ಪೇಟೆಯ ಶ್ರೀ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿದೆ. ಇದರ ಪೂರ್ವಭಾವಿ ಸಿದ್ಧತೆಯ ಅಂಗವಾಗಿ ಜ.5ರಂದು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಮನವಿ ಪತ್ರ ಬಿಡುಗಡೆಗೊಳಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿಯ ಕುರಿತು ಮಾತನಾಡಿ, ಉಪ ಸಮಿತಿಗಳನ್ನು ರಚಿಸುವ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಎಂ.ಬಿ. ಸದಾಶಿವ, ಅಶೋಕ ಪ್ರಭು ಸುಳ್ಯ, ದೇವರಾಜ್ ಆಳ್ವ, ಮಂದಿರದ ಅರ್ಚಕ ಗೋಪಾಲಕೃಷ್ಣ ಪಿ, ಧರ್ಮದರ್ಶಿ
ಮಂಡಳಿಯ ಕಾರ್ಯದರ್ಶಿ ಶ್ರೀನಿವಾಸ ಸುಳ್ಯ, ಸದಸ್ಯರಾದ ಮಹಾಬಲ ಕೇರ್ಪಳ, ಗೋಪಾಲ ಎಸ್ ನಡುಬೈಲು, ಭಾಸ್ಕರ ನಾಯರ್ ಅರಂಬೂರು, ಪುರುಷೋತ್ತಮ ಕೆ.ಎಸ್, ಸಂದೇಶ್ ಕುರುಂಜಿ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.
- Tuesday
- December 3rd, 2024