
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ವತಿಯಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗಳನ್ನು, ಸಭಾಪತಿಗಳಾದ ಸುಧಾಕರ್ ರೈ ಇವರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ ಈ ಇವರಿಗೆ ಹಸ್ತಾಂತರಿಸಿ ಸುಳ್ಯ ತಾಲೂಕಿನ ಆಯ್ದ ಶಾಲೆಗಳಿಗೆ ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಮತ್ತು ಭಾ.ರೆ.ಕ್ರಾ. ನಿರ್ದೇಶಕರಾದ ಪೃಥ್ವಿ ಕುಮಾರ್ ಟಿ, ಭಾ.ರೆ.ಕ್ರಾ. ನಿರ್ದೇಶಕರಾದ ಶಿವಪ್ರಸಾದ್ ಕೆ ವಿ, ಪದ್ಮ, ಕಾರ್ಯದರ್ಶಿಗಳಾದ ತಿಪ್ಪೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ವೀಣಾ ಎಂ ಟಿ, ಆಯ್ಕೆ ಮಾಡಿದ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಿಬ್ಬಂದಿಯವರು ಭಾಗವಹಿಸಿದ್ದರು.