ಸುಳ್ಯ :- 67ನೇ ರಾಷ್ಟ್ರ ಮಟ್ಟದ 17 ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾವಳಿಯು ತೆಲಂಗಾಣ ಕಾಮರೆಡ್ಡಿ ನಗರದಲ್ಲಿ ಜನವರಿ 6ರಿಂದ 11 ರ ವರೆಗೆ ಆಯೋಜಿಸಿಲಾಗಿದ್ದು ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯದ ತಂಡದ ಕ್ರೀಡಾಪಟುಗಳ ಸುರಕ್ಷತೆ ಹಾಗೂ ಮೇಲ್ವಿಚಾರಕರಾಗಿ ಕರ್ನಾಟಕ ಪಬ್ಲಿಕ್‌ಸ್ಕೂಲ್ ಬೆಳ್ಳಾರೆ ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಪಿ ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರು ನೇಮಕ ಮಾಡಿರುತ್ತಾರೆ. ಕ್ರೀಡಾಪಟುಗಳು ಮತ್ತು ಕ್ರೀಡಾಧಿಕಾರಿಗಳು ಜನವರಿ 4 ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಕಾಚಿಗುಡ ಎಕ್ಸ್ಪ್ರೆಸ್ ರೈಲಿನಲ್ಲಿ ಹೊರಟು ಜನವರಿ 6 ರಂದು ವರದಿ ಮಾಡಿಕೊಳ್ಳಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪುಪ್ಪಾವತಿ ಪಿ ಇವರು ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ದಿ/ಬಾಳಪ್ಪ ಗೌಡ ಪುರಿಯಮನೆ ಹಾಗೂ ಶ್ರೀಮತಿ ಮೀನಾಕ್ಷಿ ಇವರ ಪುತ್ರಿಯಾಗಿದ್ದು ಪಂಜ ಗ್ರಾಮಪಂಚಾಯತ್ ಸದಸ್ಯರಾದ ಜಗದೀಶ್ ಪುರಿಯ ಇವರ ಸಹೋದರಿ ನಿಸರ್ಗ ಎಂಟರ್‌ಪ್ರೈಸ್ ಮಾಲಕರಾದ ಮನೋಜ್ ಕುಮಾರ್ ಬಿ ಆರ್ ಇವರ ಧರ್ಮಪತ್ನಿ.ಇವರು ರಾಜ್ಯ ಮಟ್ಟದ ವಾಲಿಬಾಲ್ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಭಾರತ ಸೇವಾದಳದ ಕೇಂದ್ರನಾಯಕ ತರಬೇತಿ ಪಡೆದ ಜಿಲ್ಲೆಯ ಏಕೈಕ ಮಹಿಳೆಯಾಗಿದ್ದಾರೆ. ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 17 ವರ್ಷಗಳ ಕಾಲ ಪುತ್ತೂರು ತಾಲೂಕು ಭಾರತ ಸೇವಾದಳದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದು, 23 ವರ್ಷ ಸ.ಹಿ.ಪ್ರಾ.ಶಾಲೆ ಭಕ್ತಕೋಡಿಯಲ್ಲಿ ಕರ್ತವ್ಯ ನಿರ್ವಹಿಸಿ ಭಡ್ತಿಹೊಂದಿ .ಕೆ.ಪಿ.ಎಸ್.ಬೆಳ್ಳಾರೆಯಲ್ಲಿ ದೈ.ಶಿ.ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
- Thursday
- November 21st, 2024