ಸುಳ್ಯ: ಪೈಚಾರು ಸಮೀಪ ರಿಕ್ಷಾಕ್ಕೆ ಬೈಕ್ ಗುದ್ದಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಜ.2ರಂದು ನಡೆದಿದೆ.
ಸುಳ್ಯ ಕಡೆಯಿಂದ ಪೈಚಾರು ಕಡೆಗೆ ಬರುತ್ತಿದ್ದ ಬೈಕ್ ಶಾಂತಿನಗರ ಕ್ರಾಸ್ ಬಳಿ ನಿಲ್ಲಿಸಿದ್ದ ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯವಾಗಿದ್ದು ಅವರನ್ನು ಕೂಡಲೇ ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಿರುವುದಾಗಿ ತಿಳಿದು ಬಂದಿದೆ. ಬೈಕ್ ಸವಾರ ಅಡ್ಕಾರು ಪದವು ನವರೆಂದು ತಿಳಿದು ಬಂದಿದೆ. ಬೈಕ್ ಸಂಪೂರ್ಣ ಜಖಂಗೊಂಡಿದೆ.