ವಿವೇಕ ಶಾಲಾ ಕಟ್ಟಡ ಯೋಜನೆಯಡಿ ರೂ 13.90 ಲಕ್ಷ ಅನುದಾನದಲ್ಲಿ ದೇವಚಳ್ಳ ಗ್ರಾಮದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಮಾವಿನಕಟ್ಟೆ ಇದರ ನೂತನ ಕಟ್ಟಡ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ ಈ, ರಾಜೇಶ್ವರಿ ಎಂ, ದುರ್ಗದಾಸ್ ಮೆತ್ತಡ್ಕ, ಸಂಧ್ಯಾ ಕುಮಾರಿ, ಆಶಾ ಎಸ್, ಪಿಡಿಓ ಗುರು ಪ್ರಸಾದ್, ಶ್ರೀಧರ್ ಗೌಡ, ಸುಬ್ರಹ್ಮಣ್ಯ ಪಾರೆಪ್ಪಾಡಿ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.