ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಮಾವುತ ಶ್ರೀನಿವಾಸ ಗೌಡರಿಗೆ ಡಾl ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಜಂಟಿಯಾಗಿ ಸನ್ಮಾನವನ್ನು ಏರ್ಪಡಿಸಲಾಯಿತು.
ಆನೆ ಮಾವುತ ಶ್ರೀನಿವಾಸಗೌಡರ ಹುಟ್ಟೂರು, ಬಾಲ್ಯದಿಂದ ಬೆಳೆದ ರೀತಿ, ತನ್ನ ಅಜ್ಜನ ಕಾಲದಿಂದ ವಂಶ ಪಾರಂಪರಿಯವಾಗಿ ಆನೆ ಮಾವತರಾಗಿ ಸೇವೆ ಸಲ್ಲಿಸಿದ ವಿವರಗಳು ,ಉಜಿರೆಯ ಕೃಷ್ಣ ಆನೆಯ ಮಾವುತನಾಗಿ ರಾಜ್ಯಾದ್ಯಂತ ಸಲ್ಲಿಸಿದ ಸೇವೆ ಹಾಗೂ ವಿವಿಧ ಸಮಾರಂಭಗಳು ಗಣ್ಯರ ಬರುವಿಕೆ, ಮೆರವಣಿಗೆ ಗಳಲ್ಲಿ ಪಾಲ್ಗೊಂಡ ರೀತಿ, ತದನಂತರ ಧರ್ಮಸ್ಥಳದಲ್ಲಿ ಶಂಕರ ಆನೆಯ ಮಾವುತರಾಗಿ ಸಲ್ಲಿಸಿದ ಸೇವೆಯ ಬಗ್ಗೆ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ 15 ವರ್ಷಗಳಿಂದ ಯಶಸ್ವಿನಿ ಆನೆಯ ಪ್ರೀತಿಯ ಮಾವುತನಾಗಿ, ಪ್ರಾಮಾಣಿಕನಾಗಿ ,ಭಕ್ತರ ಪ್ರೀತಿ ಆದರಗಳಿಗೆ ಪಾತ್ರರಾಗಿ ಸೇವೆ ಸಲ್ಲಿಸಿ ದೇವಳದಿಂದ ನಿವೃತ್ತರಾದ ಶ್ರೀನಿವಾಸರವರನ್ನು ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆ ಪದವು ಹಾಗೂ ಸುಬ್ರಹ್ಮಣ್ಯದ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಉಮೇಶ್. ಕೆ. ನವರು ಶಾಲು ಹೊದಿಸಿ ,ಹಾರ ಹಾಕಿ, ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ, ಸನ್ಮಾನಿಸಿದರು. ಸನ್ಮಾನಿತರ ಬಗ್ಗೆ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಮಾತನಾಡಿದರು. ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಉಮೇಶ ಕೆ.ಎಂ. ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆಂಕಟೇಶ ಎಚ್.ಎಲ್. ಸನ್ಮಾನಿತರ ಗುಣಗಾನ ಮಾಡಿದರು ಸನ್ಮಾನಕ್ಕೆ ಉತ್ತರಿಸಿದ ಶ್ರೀನಿವಾಸ್ ಅವರು “ನಾನು ಸುಬ್ರಹ್ಮಣ್ಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕೃಪೆಯಿಂದ 15 ವರ್ಷಗಳ ಕಾಲ ನಿರಂತರವಾಗಿ ಯಶಸ್ವಿ ಆನೆಯ ಸೇವೆಯನ್ನು ಪ್ರಾಮಾಣಿಕನಾಗಿ ಮಾಡಿದ್ದೇನೆ. ಎಲ್ಲರ ಜನರ ಪ್ರೀತಿಗೆ ಪಾತರಾಗಿದ್ದೇನೆ .ಆ ನನ್ನ ಸೇವೆಯನ್ನು ಗುರುತಿಸಿ ಇಂದು ನನಗೆ ನೀಡಿದ ಸನ್ಮಾನ ನನಗೆ ಬಹಳ ಖುಷಿ ತಂದಿದೆ ಎಂದರು.” ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಲೋಕೇಶ ಬಿ ಎನ್, ಸುಬ್ರಹ್ಮಣ್ಯದ ಪತ್ರಕರ್ತ ಪ್ರಕಾಶ್, ಅಭಿಷೇಕ್ ನಡು ತೋಟ, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಪುಷ್ಪ ಕುಮಾರಧಾರ ,ಸೂರ್ಯ ಭಟ್, ಕಾರ್ತಿಕ್ ,ಬೆಳ್ಳಿಯಪ್ಪ ,ರಮ್ಯ ಮುಂತಾದವರು ಉಪಸ್ಥಿತರಿದ್ದರು.