Ad Widget

ಸುಳ್ಯದ ಅಮರ ಸಂಘಟನಾ ಸಮಿತಿ ಸಾರಥ್ಯದಲ್ಲಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ – ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳ ಸಾಥ್ – ಎ.ಓ.ಎಲ್.ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಚಾಲನೆ


ಸುಳ್ಯ ಅಮರ ಸಂಘಟನಾ ಸಮಿತಿ ರಿ. ,ನಗರ ಪಂಚಾಯತ್ ಸುಳ್ಯ , ತಾಲೂಕು ಕಛೇರಿ ಸುಳ್ಯ , ತಾಲೂಕು ಪಂಚಾಯತ್ ಸುಳ್ಯ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ , ಆರಕ್ಷಕ ಠಾಣೆ ಸುಳ್ಯ , ವಕೀಲರ ಸಂಘ ಸುಳ್ಯ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ , ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 154ನೇ ಗಾಂಧಿ ಜಯಂತಿಯ ಅಂಗವಾಗಿ ಒಂದು ಹೆಜ್ಜೆ ಸ್ವಚ್ಚತೆಯ ಕಡೆಗೆ ಎನ್ನುವ ಧ್ಯೇಯದೊಂದಿಗೆ ಸ್ವಚ್ಚತಾ ಕಾರ್ಯಕ್ರಮಕ್ಕೆ ಸುಳ್ಯ ಜ್ಯೋತಿವೃತದಿಂದ ಚಾಲನೆ ನಿಡಲಾಯಿತು.
ಈ ಕಾರ್ಯಕ್ರಮವನ್ನು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಅಮರ ಸಂಘಟನಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂಧರ್ಭದಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್ , ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ರಾಜಣ್ಣ , ನಗರ ಪಂಚಾಯತ್ ಮುಖ್ಯಧಿಕಾರಿ ಸುಧಕಾರ್ ಎಂ ಹೆಚ್ , ಸುಳ್ಯ ಪೋಲಿಸ್ ಉಪನಿರಿಕ್ಷಕ ಈರಯ್ಯ ದೊಂತೂರು, ತಾಲೂಕು ಆರೋಗ್ಯಧಿಕಾರಿ ಡಾ.ನಂದಕುಮಾರ್ , ಸುಳ್ಯ ವಕೀಲರ ಸಂಘದ ಕೋಶಧಿಕಾರಿ ಜಗದೀಶ್ ಡಿ.ಪಿ , ಸುಳ್ಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ , ರೋಟರಿ ವಿದ್ಯಾಸಂಸ್ಥೆ ಸಂಚಾಲಕ ಗಿರೀಜಾ ಶಂಕರ್ ತುದಿಯಡ್ಕ , ಇವರುಗಳು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ , ಉಬರಡ್ಕ ರಾಜ್ ಸೌಂಡ್ಸ್ ಮಾಲಕ ರಾಜೇಶ್ ರೈ , ವಿವಿಧ ಸಂಘ ಸಂಸ್ಥೆಯ ಮುಖಂಡರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಸ್ವಚ್ಚ ಸುಳ್ಯಕ್ಕೆ ತನ್ನದೆ ಆದ ಸೇವೆ ಸಲ್ಲಿಸಿ ಇತರರಿಗೆ ಪ್ರೆರಣೆಯಾದ ನಗರ ಪಂಚಾಯತ್ ಸದಸ್ಯ ವಿನಯ ಕುಮಾರ್ ಹಾಗೂ ಪ್ರಭಾಕರ್ ನಾಯರ್ ಇಬ್ಬರನ್ನು ಸ್ವಚತಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಬಳಿಕ ಜ್ಯೋತಿವೃತದಿಂದ ಸ್ವಚ್ಚತಾ ಕಾರ್ಯ ಆರಂಭಿಸಿ ಗಾಂಧಿನಗರವಾಗಿ ಎಪಿಎಂಸಿ ಬಳಿ ಮುಕ್ತಾಯಗೊಂಡಿತು.
ಈ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು , ಶಿಕ್ಷಕವೃಂದ , ಇಲಾಖೆ ,ಸಂಘ ಸಂಸ್ಥೆಯ ಸದಸ್ಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!