- Thursday
- November 21st, 2024
ಹರಿಹರಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ನಾಗದೇವರಿಗೆ, ಸಿಯಾಳಭಿಷೇಕ,ಹಾಲಾಭಿಷೇಕ ನಾಗತಂಬಿಲ ನಡೆಯಿತು ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ಸಹಾಯಕ ಅರ್ಚಕರಾದ ಕೃಷ್ಣ ಕುಮಾರ್ ದೇವರಗದ್ದೆ,ಆಡಳಿತ ಮಂಡಳಿಯವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸೋಮವಾರ ಪೂರ್ವಶಿಷ್ಠ ಸಂಪ್ರದಾಯದಂತೆ ಆಚರಿಸಲಾಯಿತು. ಮದ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ನಂತರ ಮಹಾಮಂಗಳಾರತಿ ನೆರವೇರಿಸಿದರು.ಅಲ್ಲದೆ...
ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಾಗರಪಂಚಮಿಯ ಶುಭ ದಿನ ಬ್ಯಾಂಕ್ ಆಫ್ ಬರೋಡಾದಿಂದ ಗಣಕಯಂತ್ರಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಹಾಗೂ ಝೋನಲ್ ಹೆಡ್ ಶ್ರೀಮತಿ ಗಾಯತ್ರಿ.ಆರ್ಅವರು ಶ್ರೀ ದೇವಳಕ್ಕೆ ಸುಮಾರು ೧ ಲಕ್ಷದ ೨೫ ಸಾವಿರ ಮೌಲ್ಯದ ೫ ಕಂಪ್ಯೂಟರ್‌ಗಳನ್ನು ಮಂಜೂರಾತಿಗೊಳಿಸಿದ್ದರು. ಆ.21...
ನಾಗರ ಪಂಚಮಿಯ ಅಂಗವಾಗಿ ಎಲಿಮಲೆ ಅಂಬೆಕಲ್ಲು ತರವಾಡು ಮನೆಯಲ್ಲಿ ನಾಗನ ಕಲ್ಲಿಗೆ ಪೂಜೆ ಹಾಗೂ ಹಾಲು ಎರೆಯುವ ಕಾರ್ಯಕ್ರಮ ನಡೆಯಿತು. ಕುಟುಂಬದ ಸದಸ್ಯರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.
ಮರ್ಕಂಜ ಗ್ರಾಮದ ರೆಂಜಾಳ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಾಗನ ಕಟ್ಟೆಯಲ್ಲಿ ಶ್ರೀ ನಾಗ ದೇವರಿಗೆ ಹಾಲಿನ ಅಭಿಷೇಕದೊಂದಿಗೆ ವಿಶೇಷ ಪೂಜೆ ನಡೆಯಿತು. ಪೂಜಾ ವಿಧಿ ವಿಧಾನವನ್ನು ಶ್ರೀ ಸುಬ್ರಹ್ಮಣ್ಯ ಭಟ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸ್ಥಳೀಯ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ ೩ ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗರಪಂಚಮಿಯ ಶುಭದಿನವಾದ ಸೋಮವಾರ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಆಡಳಿದ ಮಂಡಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀ ದೇವರಿಗೆ ಇಸ್ರೋ ಹೆಸರಿನಲ್ಲಿ...
ಅಜ್ಜಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ನಾಗನ ಕಟ್ಟೆಯಲ್ಲಿ ಶ್ರೀ ನಾಗ ದೇವರಿಗೆ ಹಾಲಿನ ಅಭಿಷೇಕದೊಂದಿಗೆ ವಿಶೇಷ ಪೂಜೆ ನಡೆಯಿತು. ಪೂಜಾ ವಿಧಿ ವಿಧಾನವನ್ನು ಶ್ರೀ ಗಣೇಶ್ ಭಟ್ ನಡೆಸಿಕೊಟ್ಟರು,ಈ ಸಂದರ್ಭದಲ್ಲಿ ಸ್ಥಳೀಯ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಅತಿಯಾಗಿ ಭ್ರಷ್ಟಾಚಾರ ನಡೆಯುತಿದ್ದು, ಕಂದಾಯ, ಸರ್ವೇ ಹಾಗೂ ಉಪ ನೋಂದಾವಣೆ ಕಚೇರಿಯಲ್ಲಿ, ಮಧ್ಯವರ್ತಿಗಳು ಇಲ್ಲದೇ ಯಾವುದೇ ಕೆಲಸ ಆಗುತ್ತಿಲ್ಲ. ಸರಕಾರದ ಚಲನ್ ಕಟ್ಟಿ ನೇರವಾಗಿ ಹೋದಲ್ಲಿ, ಅನೇಕ ಕಾನೂನುಗಳ ಬಗ್ಗೆ ಕುಂಟು ನೆಪ ಹೇಳಿ, ಸಾರ್ವಜನಿಕರನ್ನು ಭಯ ಪಡಿಸಿ ಹಣ ಪೀಕಿಸುವ, ಅಧಿಕಾರಿಗಳು ತುಂಬಿ ಹೋಗಿದ್ದಾರೆ. ನಾವು ಆಯ್ಕೆ ಮಾಡಿರುವ ಜನಪ್ರತಿನಿಧಿಗಳು, ಶಾಸಕರು, ಕಡತ...
https://youtu.be/_Wq_AuiHgmM?si=VICNd2mr6CdxTq3O ಅಜ್ಜಾವರ ಗ್ರಾಮದ ಶಿವಪ್ರಕಾಶ್ ಗುರುಸ್ವಾಮಿಗಳ ನೇತೃತ್ವದಲ್ಲಿ ಶಬರಿಮಲೆಗೆ ತೆರಳಿದ ಭಕ್ತರು ಇಂದು ಮುಂಜಾನೆ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಸೌಜನ್ಯ ಪ್ರಕರಣದ ಬಗ್ಗೆ ಪಾರ್ಥಿಸಲಾಯಿತು. ಈ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆಯು ಕೆಟ್ಟ ಹೆಸರು ಬರುತ್ತಿದೆ ಇದು ಆಗಬಾರದು ಹಾಗೂ ಅಯ್ಯಪ್ಪನ ಕೃಪಕಟಾಕ್ಷದಿಂದ ಮುಂದಿನ ಸಂಕ್ರಮಣದ ಒಳಗಾಗಿ ಅಯ್ಯಪ್ಪ ಸ್ವಾಮಿಯು ಆ ದುಷ್ಕೃತ್ಯ ನಡೆಸಿದವರಿಗೆ ತಕ್ಕ ...
Loading posts...
All posts loaded
No more posts