Ad Widget

ಪೈಕ : ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಗುದ್ದಲಿ ಪೂಜೆ

ವಳಲಂಬೆ - ಪೈಕ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಸಚಿವ ಎಸ್. ಅಂಗಾರ ಫೆ. 4 ರಂದು ಗುದ್ದಲಿಪೂಜೆ ನೆರವೇರಿಸಿದರು. ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗ್ರಾ.ಪಂ.ಸದಸ್ಯ ವೆಂಕಟ್ ವಳಲಂಬೆ, ತಾ.ಪಂ. ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್, ಗ್ರಾ.ಪಂ.ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಗ್ರಾ.ಪಂ. ಸದಸ್ಯರಾದ ರೇವತಿ ಆಚಳ್ಳಿ, ಸುಮಿತ್ರಾ ಮೂಕಮಲೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹರಿಹರ ಪಲ್ಲತ್ತಡ್ಕ :- ಲಯನ್ಸ್ ಕ್ಲಬ್ ವತಿಯಿಂದ ಕ್ಯಾನ್ಸರ್ ದಿನಾಚರಣೆ

ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕ ದಲ್ಲಿ ಫೆ.04 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.ಪ್ರೋ.ರಂಗಯ್ಯ ಶೆಟ್ಟಿಗಾರ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ ಕಿರಿಭಾಗ, ಶಾಲಾ ಎಸ್.ಡಿ.ಎಂ.ಸಿ ಅದ್ಯಕ್ಷ ನೇಮಿಚಂದ್ರ ದೋಣಿಪಳ್ಳ, ಶಾಲಾ ಮುಖ್ಯೋಪಾಧ್ಯಾಯಿನಿ...
Ad Widget

ನಾಲ್ಕೂರು : ಸಚಿವ ಅಂಗಾರರಿಂದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ರವರು ಫೆ.04 ರಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಅಣೆಕಟ್ಟು ನಿರ್ಮಾಣ, ಮರಕತ - ಉಜಿರಡ್ಕ ರಸ್ತೆ ಕಾಂಕ್ರೀಟೀಕರಣ, ನಡುಗಲ್ಲು - ಕಲ್ಲಾಜೆ ರಸ್ತೆ ಕಾಂಕ್ರೀಟೀಕರಣ, ನಡುಗಲ್ಲು - ಚಾರ್ಮತ - ಉತ್ರಂಬೆ ಭಾಗದ ರಸ್ತೆ ಕಾಂಕ್ರೀಟೀಕರಣ, ಹಾಲೆಮಜಲು - ಕುಳ್ಳಂಪಾಡಿ - ಚಾರ್ಮತ...

ಮಾವಿನಕಟ್ಟೆ : ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರ, ಎಲಿಮಲೆ ಉಪಕೇಂದ್ರ ವತಿಯಿಂದ ಮಾವಿನಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು. ಕ್ಯಾನ್ಸರ್ ಜಾಗೃತಿ ಬಗ್ಗೆ ಸಮುದಾಯ ಆರೋಗ್ಯ ಅಧಿಕಾರಿ ಕು.ಮೋನಿಷಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ ಮಣಿಕಂಠ...

ಜೇಸೀಐ ಸುಳ್ಯ ಸಿಟಿ ವತಿಯಿಂದ ಪ್ರಬಂಧ ಸ್ಪರ್ಧೆ

ಜೇಸೀಐ ಸುಳ್ಯ ಸಿಟಿ, ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು, ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ ದಕ್ಷಿಣ ಕನ್ನಡ,ಕ್ಷಯ ಚಿಕಿತ್ಸಾ ಘಟಕ ಸುಳ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಅರಂತೋಡು ಇದರ ವತಿಯಿಂದ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡುನಲ್ಲಿ ಟಿ‌ಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ಮಾಹಿತಿ ಮತ್ತು ಪ್ರಬಂಧ ಸ್ಪರ್ಧೆ...

ಕಾಂಚೋಡು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು (ಫೆ.04) ದೇವಾಲಯದಲ್ಲಿ ಪೂರ್ವಾಹ್ನ ದೇವತಾ ಪ್ರಾರ್ಥನೆ ನಡೆಸಿ ನಂತರ ಗೊನೆ ಮುಹೂರ್ತ ಕಾರ್ಯಕ್ರಮ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕಾಂಚೋಡು, ಪರಶುರಾಮ ಕಾಯಾರ ದೊಡ್ಡಮನೆ, ಶ್ರೀ ಕ್ಷೇತ್ರದ ಅರ್ಚಕರಾದ...

ಒಂದೇ ಬಾಳೆಗೊನೆಯಲ್ಲಿ ಎರಡು ಪೂಂಬೆ ಸೃಷ್ಟಿ

ಒಂದೇ ಬಾಳೆಗೊನೆಯಲ್ಲಿ ಎರಡು ಪೂಂಬೆ ಸೃಷ್ಟಿಯಾದ ಅಪರೂಪದ ಪ್ರಕೃತಿ ವಿಸ್ಮಯ ದೇವಚಳ್ಳ ಗ್ರಾಮದ ದೇವದಲ್ಲಿ ಕಾಣಸಿಕ್ಕಿದೆ. ದೇವ ಮನೆ ರಾಮಣ್ಣ ಗೌಡರ ತೋಟದಲ್ಲಿರುವ ಗಾಳಿ ಬಾಳೆಗೊನೆಯಲ್ಲಿ ಎರಡು ಪೂಂಬೆ ಬಿಟ್ಟಿದೆ. ಪ್ರಕೃತಿಗೆ ಯಾರು ಸಾಟಿ ಇಲ್ಲ ಎಂಬುದಕ್ಕೆ ಈ ವಿಸ್ಮಯವೇ ಸಾಕಲ್ಲವೇ?

ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನ್ನಿಧ್ಯದಲ್ಲಿ ವಾರ್ಷಿಕ ಕೋಲೋತ್ಸವ, ಸಾಧಕರಿಗೆ ಸನ್ಮಾನ

ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಘಂಟೆ ತೆಂಬೆರೆಯಲ್ಲಿ ಶ್ರೀ ಕೊರಗಜ್ಜ ದೈವದ ಕೋಲೋತ್ಸವವು ಫೆ.03 ಗುರುವಾರದಂದು ನಡೆಯಿತು. ವಾರ್ಷಿಕ ಕೋಲೋತ್ಸವದ ಅಂಗವಾಗಿ ಸಂಜೆ ಭಜನಾ ಸಂಕೀರ್ತಣೆ ನಡೆದು ನಂತರ ಕಲ್ಲುರ್ಟಿ-ಮಂತ್ರದೇವತೆ ಹಾಗೂ ಗುಳಿಗನಿಗೆ ಪರ್ವ ಮತ್ತು ಕಲ್ಲುರ್ಟಿ ದರ್ಶನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಿನ್ನಿಮಜಲು ಹೇಮಂತ್...

ಎಡಮಂಗಲ: ಶ್ರೀ ಮಹಾಲಿಂಗರಾಯ ಗ್ರಾಮ ದೈವ ಮತ್ತು ಅನಾದಿ ಶ್ರೀ ದೈವಗಳ ನೇಮೋತ್ಸವ

ಎಡಮಂಗಲದ ಪಿಲಿಕುಂಜ ಸ್ಥಾನ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಮಹಾಲಿಂಗರಾಯ ಗ್ರಾಮ ದೈವ ಮತ್ತು ಅನಾದಿ ಶ್ರೀ ದೈವಗಳ ನೇಮೋತ್ಸವದ ಅಂಗವಾಗಿ ಇಂದು ಶ್ರೀ ಮಹಾಲಿಂಗರಾಯ ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು. ನೇಮೋತ್ಸವದ ಬಳಿಕ ಶ್ರೀ ದೈವಗಳ ಕೈಕಾಣಿಕೆ, ಹರಕೆ ಸೇವೆ, ದೈವಗಳ ಅನುಗ್ರಹದ ನುಡಿಯೊಂದಿಗೆ ವರ್ಷಾವಧಿ ಬೂಲ್ಯಪ್ರಸಾದ ವಿತರಣೆ ನಡೆಯಿತು....

ಫೆ.11- ಫೆ.14: ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಅಣ್ಣಪ್ಪಾದಿ ದೈವಗಳ ನೇಮ
ಮಾ.01ರಂದು ಮಹಾಶಿವರಾತ್ರಿ ಉತ್ಸವ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮವು ಫೆ.11 ಶುಕ್ರವಾರದಂದು ಆರಂಭಗೊಳ್ಳಲಿದ್ದು, ಫೆ.14 ಸೋಮವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಫೆ.11 ಶುಕ್ರವಾರದಂದು ಸಂಜೆ ಗಂಟೆ 4.30ಕ್ಕೆ ತಂತ್ರಿಗಳವರ ಆಗಮನ, ಸಂಜೆ ಗಂಟೆ 5.00ಕ್ಕೆ ಊರ ಭಕ್ತಾದಿಗಳಿಂದ ಬಾಳಿಲದಿಂದ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ಹಸಿರು...
Loading posts...

All posts loaded

No more posts

error: Content is protected !!