Ad Widget

ಗುತ್ತಿಗಾರು : ದೇವಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಕಾವ್ಯ ಮೆಡಿಕಲ್ ಶುಭಾರಂಭ

ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಕಾವ್ಯ ಮೆಡಿಕಲ್ ಫೆ. 7 ರಂದು ಶುಭಾರಂಭಗೊಂಡಿತು. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ ವಳಲಂಬೆ, ತಾ.ಪಂ. ಮಾಜಿ ಅಧ್ಯಕ್ಷ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಫೆ.08 ರಂದು ಮಾನ್ಯ ಮುಜರಾಯಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ನಡೆಸಲಾಗುತ್ತಿರುವ ವನಸಂವರ್ಧನಾ ಕಾರ್ಯಕ್ರಮದ ಅಂಗವಾಗಿ ನಾಗಸಂಪಿಗೆ ಗಿಡವನ್ನು ನೆಟ್ಟರು.ನಂತರ ಮಾನ್ಯ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಅಂಗಾರ ಹಾಗೂ ಜಿಲ್ಲಾಧಿಕಾರಿಗಳಾದ...
Ad Widget

ಐವರ್ನಾಡು : ಜಾತ್ರೋತ್ಸವ ,ಧಾರ್ಮಿಕ ಸಭಾ ಕಾರ್ಯಕ್ರಮ – ಫೆ.10 ರಂದು ದರ್ಶನ ಬಲಿ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಅಂಗವಾಗಿ ಫೆ.8ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿದ್ದು, ರಾತ್ರಿ ಸಭಾ ಕಾರ್ಯಕ್ರಮ ನಡೆಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್ ಎನ್ ಮನ್ಮಥ, ದ.ಕ.ಜಿಲ್ಲಾ ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರು,...

ಬೆಳ್ಳಾರೆ: ಅಜಪಿಲ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.12ರಿಂದ ಫೆ.16ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಫೆ.08ರಂದು ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.

ಫೆ.12-ಫೆ.16: ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.12ರಿಂದ ಫೆ.16ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಫೆ.12 ಶನಿವಾರದಂದು ಬೆಳಗ್ಗೆ 9.30ಕ್ಕೆ ಉಗ್ರಾಣ ಮುಹೂರ್ತ, ಸಂಜೆ 5.30ಕ್ಕೆ ತಂತ್ರಿಗಳ ಆಗಮನ, ಸ್ವಾಗತ, ಪ್ರಾರ್ಥನೆ, ದೀಪಾರಾಧನೆ,...

ಮೋನಪ್ಪ ಗೌಡ ಕೂರೋಡಿ ನಿಧನ

ಪೆರುವಾಜೆ ಗ್ರಾಮದ ಕಾನಾವು ಕೂರೋಡಿ ನಿವಾಸಿ ಆಹಾರ ಇಲಾಖೆಯ ನಿವೃತ್ತ ಉದ್ಯೋಗಿ ಮೋನಪ್ಪ ಗೌಡ ಕೂರೋಡಿ(84) ಫೆ.8 ರಂದು ಮುಂಜಾನೆ ನಿಧನರಾದರು. ಮೃತರು ಪತ್ನಿ ರುಕ್ಮಿಣಿ, ಪುತ್ರ ಪೆರುವಾಜೆ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಪೆರುವಾಜೆ ಗ್ರಾ.ಪಂ.ಮಾಜಿ ಸದಸ್ಯ ಉಮೇಶ್ ಕೆಎಂಬಿ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

ಆಲೆಟ್ಟಿ ಗುಂಡ್ಯ : ಜನನಿ ಫ್ರೆಂಡ್ಸ್ ಕ್ಲಬ್ ದಶ ಸಂಭ್ರಮ – ನೂತನ ಟೀ ಶರ್ಟ್ ಬಿಡುಗಡೆ

ಜನನಿ ಫ್ರೆಂಡ್ಸ್ ಕ್ಲಬ್ (ರಿ) ಗುಂಡ್ಯ- ಆಲೆಟ್ಟಿ ಇದರ ದಶ ಸಂಭ್ರಮದ ಸವಿ ನೆನಪಿಗಾಗಿ ಫೆ.4 ರಂದು ಗುಂಡ್ಯ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನೂತನ ಟೀ ಶರ್ಟ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ದಿನೇಶ್ ಕಣಕ್ಕೂರು , ಆಲೆಟ್ಟಿ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ನಾರಾಯಣ ರೈ ಆಲೆಟ್ಟಿ...

ಗಡಿಕಲ್ಲು :- ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಗೊನೆ ಮುಹೂರ್ತ

ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಮತ್ತು 16 ರಂದು ಒತ್ತೆಕೋಲ ನಡೆಯಲಿದ್ದು, ಫೆ.07 ರಂದು ಗೊನೆ ಮುಹೂರ್ತ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಅದ್ಯಕ್ಷರಾದ ದಿನೇಶ್ ಕುಮಾರ್ ಮಡ್ತಿಲ, ಉಪಾಧ್ಯಕ್ಷರಾದ ಸತೀಶ್.ಟಿ.ಎನ್, ಕಾರ್ಯದರ್ಶಿ ನಾರಾಯಣ ಪನ್ನೆ, ಸದಸ್ಯರಾದ ವೆಂಕಟರಮಣ.ಕೆ, ಪ್ರದಾನ ಅರ್ಚಕ ಚಂದ್ರಶೇಖರ ಕುಲ್ಕುಂದ, ಪವಿತ್ರ ಗಡಿಕಲ್ಲು, ಕೃಷ್ಣ ಪನ್ನೆ, ಸುರೇಶ್ ಕೆರೆಕೋಡಿ...

ಪಂಜ : ಯೋಗ ತರಬೇತಿ ಆರಂಭ

ನಿರಂತರ ಯೋಗ ಕೇಂದ್ರ ಸುಳ್ಯ ಇದರ ಶಾಖೆ ಪಂಜದಲ್ಲಿ ಫೆ.6 ರಂದು ಉದ್ಘಾಟನೆಗೊಂಡಿತು. ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಉದ್ಘಾಟಿಸಿದರು. ಪ್ರತಿ ಶನಿವಾರ ಸಂಜೆ ಗಂಟೆ 4 ರಿಂದ 5.30ವರೆಗೆ ಯೋಗ ತರಗತಿ ನಡೆಸಲಾಗುವುದು ಎಂದು ತಿಳಿಸಿದರು.

ಕೊಲ್ಲಮೊಗ್ರು : ವಿಶೇಷ ಗ್ರಾಮಸಭೆ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2020-21ನೇ ಸಾಲಿನ ದ್ವಿತೀಯ ಹಂತದ ಮತ್ತು 2021-22ನೇ ಸಾಲಿನ ಪ್ರಥಮ ಹಂತದ ಹಾಗೂ 2020-21ನೇ ಸಾಲಿನ 14&15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯು ಫೆ.07 ರ ಸೋಮವಾರದಂದು ಕೊಲ್ಲಮೊಗ್ರು ಗ್ರಾಮಪಂಚಾಯತ್ ನ ಸಭಾಭವನದಲ್ಲಿ ನಡೆಯಿತು.ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ...
Loading posts...

All posts loaded

No more posts

error: Content is protected !!