ವಿನೋಬನಗರದ ವಿವೇಕಾನಂದ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಫೆಬ್ರವರಿ 28ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ್ ಮೂಡಿತ್ತಾಯರು ವಿಶೇಷವಾದ ಜ್ಞಾನ ವಿಜ್ಞಾನ, ವಿಜ್ಞಾನವೇ ಸತ್ಯ, ಭಾರತೀಯ ಋಷಿಗಳೇ ವಿಜ್ಞಾನಿಗಳು ಎಂಬುದಾಗಿ ವಿಜ್ಞಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಸಂವಾದದ ಮೂಲಕ ತಿಳಿಸಿಕೊಟ್ಟರು. ನಂತರ
“ಈ ಭೂಮಿ ಹುಟ್ಟಿದ್ದು ಹೇಗೆ ಹೇಗೆ ಹೇಗೆ”? ಎಂಬ ಅಭಿನಯ ಗೀತೆಯ ಅರ್ಥ ತಿಳಿಸಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ವಿಜ್ಞಾನ ಲೋಕಕ್ಕೆ ಕೊಂಡೊಯ್ದರು. ನಂತರ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಗೋಪಾಲರಾವ್ ಶ್ರೀಮಾನ್, ಪ್ರೌಢಶಾಲಾ ಮುಖ್ಯಗುರುಗಳಾದ ಗಿರೀಶ್ ಶ್ರೀಮಾನ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಜಯಪ್ರಸಾದ್ ಶ್ರೀಮಾನ್, ಸಂಸ್ಥೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ತೇಜಸ್ವಿ ಮಾತಾಜಿ ಸ್ವಾಗತಿಸಿ, ಪ್ರಾಥಮಿಕ ಶಾಲಾ ಶಿಕ್ಷಕಿ ಪೂರ್ಣಿಮ ಜಯಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.