ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು, ಅಮೃತ ಮಹಿಳಾ ಮಂಡಲ ಪಂಬೆತ್ತಾಡಿ, ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ,ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಮತ್ತು ಶ್ರಮದಾನ ಫೆ. 26 ರಂದು ಪಂಬೆತ್ತಾಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತಾ ಮಹಿಳಾ ಮಂಡಲ ಅಧ್ಯಕ್ಷೆ ಅನಿತಾ ಕುಲದೀಪ್ ವಹಿಸಿದ್ದರು. ಯುವಕ ಮಂಡಲ ಅಧ್ಯಕ್ಷರಾದ ನಾಗಪ್ಪ ಗೌಡ ಪಂಜದಬೈಲು ಕೈಚೀಲಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಯಾಗಿ ಅಕ್ಷತಾ ಯುವತಿ ಮಂಡಲದ ಅಧ್ಯಕ್ಷೆ ಶ್ವೇತಾ ಪಿ. ಭಾಗವಹಿಸಿದ್ದರು. ರಮ್ಯ ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿ, ನೇಮಿರಾಜ್ ಪಂಜದಬೈಲು ವಂದಿಸಿದರು. ಜಯಂತಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸುತ್ತಲಿನ ವಠಾರದಲ್ಲಿದ್ದ ಪ್ಲಾಸ್ಟಿಕ್ ಕಸ ಕಡ್ಡಿಗಳನ್ನು ಹೆಕ್ಕುವ ಮೂಲಕ ಶ್ರಮದಾನ ಮಾಡಲಾಯಿತು.
- Tuesday
- December 3rd, 2024