Ad Widget

ಮಾ.01 : ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

ಕುಲ್ಕುಂದ ಬಸವನ ಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಾ.01 ಮಂಗಳವಾರದಂದು ವರ್ಷಂಪ್ರತಿಯಂತೆ ಮಹಾಶಿವರಾತ್ರಿಯ ಪ್ರಯುಕ್ತ ಮಹಾಮೃತ್ಯುಂಜಯ ಯಾಗ ಮತ್ತು 4 ಆಯಾಮಗಳಲ್ಲಿ ಶ್ರೀ ಬಸವೇಶ್ವರ ದೇವರಿಗೆ ಶತರುದ್ರಾಭಿಷೇಕ, ರಂಗಪೂಜೆ, ಮಹಾಪೂಜೆ ಮತ್ತು ಅಹೋರಾತ್ರಿ ಭಜನಾ ಸೇವೆ ಕಾರ್ಯಕ್ರಮವು ನಡೆಯಲಿದ್ದು, ಬೆಳಗ್ಗೆ 6:00 ಗಂಟೆಯಿಂದ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನಾ ಸೇವೆ ಪ್ರಾರಂಭ, ಬೆಳಗ್ಗೆ 8:00 ಗಂಟೆಯಿಂದ ಶ್ರೀ ಬಸವೇಶ್ವರ ದೇವರಿಗೆ ಬೆಳಗ್ಗಿನ ಮಹಾಪೂಜೆ, ಪ್ರಸಾದ ವಿತರಣೆ, ಬೆಳಗ್ಗೆ 8:30 ಕ್ಕೆ ಶ್ರೀ ದೇವಸ್ಥಾನದ ಸಾಲ ತೀರುಸುವರೆ ನಿಧಿಕುಂಭ ಸಮರ್ಪಣೆ, ಬೆಳಗ್ಗೆ 9:00 ಗಂಟೆಯಿಂದ ಮಹಾಮೃತ್ಯುಂಜಯ ಯಾಗ ಪ್ರಾರಂಭ, ಮದ್ಯಾಹ್ನ 12:00 ಗಂಟೆಗೆ ಮೃತ್ಯುಂಜಯ ಹೋಮ ಪೂರ್ಣಾಹುತಿ, ಮದ್ಯಾಹ್ನ 12:30 ಕ್ಕೆ ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ಸಹಿತ ಮಹಾಪೂಜೆ, ಪ್ರಸಾದ ವಿತರಣೆ, ಮದ್ಯಾಹ್ನ 1:00 ಗಂಟೆಗೆ ಅನ್ನಪ್ರಸಾದ, ಸಂಜೆ 6:00 ಗಂಟೆಯಿಂದ ಶತರುದ್ರಾಭಿಷೇಕ ಪ್ರಾರಂಭ, ರಾತ್ರಿ 8:00 ಗಂಟೆಗೆ ಶ್ರೀ ರಂಗಪೂಜೆ ಸಹಿತ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 10 ಗಂಟೆಯಿಂದ 12:00 ಗಂಟೆಯವರೆಗೆ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ, ರಾತ್ರಿ 2:00 ಗಂಟೆಯಿಂದ 3:00 ಗಂಟೆವರೆಗೆ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ, ರಾತ್ರಿ 3:00 ಗಂಟೆಯಿಂದ 4:00 ಗಂಟೆವರೆಗೆ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ ಹಾಗೂ ಮಾ.02 ರಂದು ಬೆಳಗ್ಗೆ 6:00 ಗಂಟೆಗೆ ಮಹಾಪೂಜೆ, ಭಜನಾ ಮಂಗಳೋತ್ಸವ ನಡೆಯಲಿದೆ.
ಅದೇ ರೀತಿ ಮಾ.01 ಮಂಗಳವಾರದಿಂದ ಮರುದಿನ ಬೆಳಗ್ಗಿನವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ.

. . . . .

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!