Ad Widget

ಕಳಂಜ: ಅಟ್ಯಾಕರ್ಸ್ ಕ್ಲಬ್ ವಾಲಿಬಾಲ್ ಪಂದ್ಯಾಟ – ಪ್ರಥಮ ವಿ.ಎಸ್.ಸಿ.ಕಳಂಜ, ದ್ವಿತೀಯ ಪ್ರಶಾಂತ್ ಟೈಗರ್ಸ್

ಕಳಂಜದ ವಿಷ್ಣುನಗರದಲ್ಲಿ ಅಟ್ಯಾಕರ್ಸ್ ವಾಲಿಬಾಲ್ ಕ್ಲಬ್ ಕಳಂಜ ವತಿಯಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಫೆ.26ರಂದು ನಡೆಯಿತು. ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ ದೀಪ ಪ್ರಜ್ವಲನೆಗೈದು ಪಂದ್ಯಾಟಕ್ಕೆ ಶುಭಹಾರೈಸಿದರು.

. . . . . . . . .

ಪಂದ್ಯಾಟವನ್ನು ವಿನಯಚಂದ್ರ ಪೈ ಬಾಚೋಡಿ ವಿದ್ಯುಕ್ತವಾಗಿ ಉದ್ಘಾಟನೆಗೈದರು. ಅಬ್ದುಲ್ ಜಮಾಲ್ ಕಳಂಜ ವಾಲಿಬಾಲ್ ತಂಡಗಳ ಟೀ-ಶರ್ಟ್ ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕಳಂಜ ವಿಷ್ಣು ಸ್ಪೋರ್ಟ್ಸ್ ಕ್ಲಬ್ ತಂಡದ ಮಾಲಕ ದಿಲೀಪ್ ಕಳಂಜ, ಕಳಂಜ ಕೆ.ಪಿ.ವಾರಿಯರ್ಸ್ ತಂಡದ ಮಾಲಕ ಅಲಿ ಕಳಂಜ, ಪ್ರಶಾಂತ್ ಟೈಗರ್ಸ್ ತಂಡದ ಮಾಲಕ ಹರ್ಷಿತ್ ಗೆಜ್ಜೆ, ಬ್ರದರ್ಸ್ ಪಲ್ಲತ್ತಡ್ಕ ತಂಡದ ಮಾಲಕ ರಜ್ಜು ಬೆಂಗಳೂರು, ಯುನಿಕ್ ಸಿಕ್ಸರ್ಸ್ ತಂಡದ ಮಾಲಕ ಸಾದಿಕ್ ಸಮಹಾದಿ ಹಾಗೂ ತಂಟೆಪ್ಪಾಡಿ ಟೈಗರ್ಸ್ ತಂಡದ ಮಾಲಕ ಪ್ರಸಾದ್ ತಂಟೆಪ್ಪಾಡಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ಗಿರಿಧರ ಕಳಂಜ ಸ್ವಾಗತಿಸಿ, ವಂದಿಸಿದರು. ಜಗದೀಶ ಮುಂಡುಗಾರು ಕಾರ್ಯಕ್ರಮ ನಿರೂಪಿಸಿದರು. ನಂತರ 8 ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ನಡೆಯಿತು. ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ದಿಲೀಪ್ ಕಳಂಜ ಮಾಲಕತ್ವದ ವಿಷ್ಣು ಸ್ಪೋರ್ಟ್ಸ್ ಕ್ಲಬ್ ಕಳಂಜ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಹರ್ಷಿತ್ ಗೆಜ್ಜೆ ಮಾಲಕತ್ವದ ಪ್ರಶಾಂತ್ ಟೈಗರ್ಸ್ ಪಡೆದುಕೊಂಡಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading