ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಹಾಗೂ ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಫೆ.25 ರಂದು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
116 ಬಾರಿ ರಕ್ತದಾನ ಮಾಡುವ ಮುಖೇನ ಸಮಾಜಕ್ಕೆ ಮಾದರಿಯಾದ ಸುಳ್ಯ ತಾಲೂಕು ರೆಡ್ ಕ್ರಾಸ್ ಸೊಸೈಟಿ ಇದರ ಸಭಾಪತಿ ಸುಧಾಕರ್ ರೈ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು.
ಹನೀಕ್ಷಾ.ಪಿ.ಆರ್ ಪ್ರಾರ್ಥನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದ ಆಡಳಿತ ಮಂಡಳಿಯ ಆಧ್ಯಕ್ಷರಾದ ವೆಂಕಟ್ ವಳಲಂಬೆ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಪರಶುರಾಮ ಚಿಲ್ತಡ್ಕ, ರೆಡ್ ಕ್ರಾಸ್ ಸುಳ್ಯ ಸಮಿತಿಯ ಕೋಶಾಧಿಕಾರಿ ವಿನಯ್ ಬೆಳ್ಳಾರೆ, ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ, ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಭಾರತೀಯ ಭೂಸೇನಾ ಯೋಧ ಮಹೇಶ್ ಕೊಪ್ಪತಡ್ಕ, ನಿವೃತ್ತ ಸೇನಾ ಸಿಬ್ಬಂದಿ ಅನಿತಾ ಮಹೇಶ್ ಇವರುಗಳು ಆಗಮಿಸಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ಕಡೋಡಿ ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ಬಿ.ಯಂ.ಎಸ್ ಆಟೋ ಯೂನಿಯನ್ ಕೋಶಾಧಿಕಾರಿ ರಾಜೇಶ್, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ತಿಮ್ಮಪ್ಪ ಗೌಡ ಚಿಕ್ಮುಳಿ, ಪ್ರೇಮಾ ಪೈಕ, ಸೌಮ್ಯ ಹಾಗೂ ಆಶಾಕಾರ್ಯಕರ್ತೆಯರು, ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇದರ ಪದಾಧಿಕಾರಿ ಪ್ರವೀಣ್ ಮತ್ತು ಸಿಬ್ಬಂದಿಗಳು, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಸುಕುಮಾರ್ ಕೋಡೊಂಬು, ಮೋಹನ್ ದಾಸ್ ಶಿರಾಜೆ, ವಿಶ್ವನಾಥ್ ಆಚಳ್ಳಿ, ಯತೀನ್ ಕಟ್ಟೆಕೋಡಿ ಹಾಗೂ ಕೋಶಾಧಿಕಾರಿ ಸುಪ್ರೀತ್ ಗುಡ್ಡೆಮನೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ರಕ್ತದಾನ ಶಿಬಿರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ಭಾಗವಹಿಸಿ ರಕ್ತದಾನ ಮಾಡಿದರು.
ಮುಂದೆ ಪ್ರತಿ 6 ತಿಂಗಳುಗಳಿಗೊಮ್ಮೆ ಟ್ರಸ್ಟ್ ವತಿಯಿಂದ ರಕ್ತದಾನ ಮಾಡುವುದಾಗಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನಿರ್ಧರಿಸಿರುತ್ತದೆ. ಅಲ್ಲದೇ ರಕ್ತದ ಬೇಡಿಕೆ ಅತೀ ಆಗತ್ಯ ಇದ್ದಲ್ಲಿ ಒದಗಿಸಿ ಕೊಡುವ ಕಾರ್ಯವನ್ನು ಯಶಸ್ವಿಗೊಳಿಸಲು ಅಮರ ಸೇನಾ ರಕ್ತದಾನಿಗಳ ತಂಡ ಕಾರ್ಯಪ್ರವೃತ್ತಿಯಾಗಲಿದೆ. ಈ ಉದ್ದೇಶ ಸಾಕಾರಗೊಳ್ಳಲು ವಾಟ್ಸಾಪ್ ಗ್ರೂಪ್ ರಚನೆ ಮಾಡಿಕೊಂಡಿದ್ದು, ಅಗತ್ಯವಿದ್ದಲ್ಲಿ ಟ್ರಸ್ಟ್ ಸಂಘಟಕರನ್ನು ಅಥವಾ ಅಮರ ಸೇನಾ ರಕ್ತದಾನ ತಂಡದ ಸದಸ್ಯರನ್ನು ಸಂಪರ್ಕಿಸಬಹುದು ಎಂದು ಟ್ರಸ್ಟ್ ತಿಳಿಸಿದೆ. ಈ ಸಂದರ್ಭದಲ್ಲಿ ತಾಲೂಕು ರೆಡ್ ಕ್ರಾಸ್ ಸಮಿತಿಯ ವತಿಯಿಂದ ಸುಧಾಕರ್ ರೈ, ದೇವಿಪ್ರಸಾದ್ ಸುಳ್ಳಿ, ಉಮೇಶ್ ಸುಳ್ಳಿ ಟ್ರಸ್ಟ್ ಗೆ ಸಹಾಯಧನವನ್ನು ನೀಡಿದರು. ವಿಶ್ವನಾಥ್ ಆಚಳ್ಳಿ ಕಾರ್ಯಕ್ರಮ ನಿರೂಪಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ