ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಮಾ.7ರಂದು ನಡೆಯಲಿದ್ದು ಇಂದು 8 ಮಂದಿ ನಾಮಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಈ ಹಿಂದೆ ಚುನಾವಣಾ ದಿನಾಂಕ ಘೋಷಣೆಯಾದ ಸಂದರ್ಭದಲ್ಲಿ 13 ಮಂದಿ ನಾಮಪತ್ರ ಸಲ್ಲಿಸಿದ್ದರು. ನಂತರ ಕೊರೊನಾ ಕಾರಣದಿಂದ ಚುನಾವಣೆಯು ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಫೆ.26 ಮತ್ತು ಫೆ.27 ರಂದು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇಂದು ಕಾಂಗ್ರೆಸ್ ಬೆಂಬಲಿತ 7 ಮಂದಿ ಅಭ್ಯರ್ಥಿಗಳಾದ ದಯಾನಂದ ಬೊಳ್ಕೋಡಿ, ವೆಂಕಟ್ರಮಣ ಇಟ್ಟಿಗುಂಡಿ, ರವಿಕುಮಾರ್ ಅಕ್ಕೋಜಿಪಾಲ್, ಚೇತನ್ ಚಿಲ್ಪಾರು, ಅಣ್ಣಾಜಿ ಗೌಡ, ನವೀನ ಕುಮಾರಿ ಆರ್ನೋಜಿ, ಗೋಪಾಲಕೃಷ್ಣ ಪಾಡಾಜೆರವರು ನಾಮಪತ್ರ ಸಲ್ಲಿಸಿರುತ್ತಾರೆ. ಓರ್ವ ಅಭ್ಯರ್ಥಿ ತಿರುಮಲೇಶ್ವರ ಬೊಳ್ಳೂರು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದು ಚುನಾವಣಾಧಿಕಾರಿಯವರ ಮೂಲಕ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು, ಬಾಲಸುಬ್ರಹ್ಮಣ್ಯ ಮೋಂಟಡ್ಕ, ಶುಭಕರ ಆರ್ನೋಜಿ ಉಪಸ್ಥಿತರಿದ್ದರು.