ಮುಪ್ಪೇರ್ಯ ಗ್ರಾಮದ ಮೂಲೆಮಜಲು ದೋಳ ಗರಡಿಯಲ್ಲಿ ಕಾಲಾವಧಿ ನಡೆಯುವ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವವು ಮಾ.05ರಂದು ನಡೆಯಲಿದೆ. ನೇಮೋತ್ಸವದ ಅಂಗವಾಗಿ ಮಾ.04ರಂದು ಪೂರ್ವಾಹ್ನ ಗಂಟೆ 10.00ಕ್ಕೆ ನಾಗತಂಬಿಲ ಹಾಗೂ ರಕ್ತೇಶ್ವರಿ ದೈವದ ತಂಬಿಲ ನಡೆಯಲಿದೆ. ರಾತ್ರಿ ಗಂಟೆ 9.00ಕ್ಕೆ ಪಾಷಾಣಮೂರ್ತಿ ಹಾಗೂ ಕೊಡಮಣಿತ್ತಾಯ ದೈವದ ನೇಮ ನಡೆಯಲಿದೆ. ಮಾ.05ರಂದು ಪೂರ್ವಾಹ್ನ ಗಂಟೆ 10.00ಕ್ಕೆ ಬ್ರಹ್ಮರ ಉತ್ಸವ, ಸಂಜೆ ಗಂಟೆ 4.00ಕ್ಕೆ ಬೈದರ್ಕಳ ಭಂಡಾರ ತೆಗೆಯುವುದು, ರಾತ್ರಿ ಗಂಟೆ 9.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ನಂತರ ಕಲ್ಮಡ್ಕ ಶ್ರೀರಾಮ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 10.00ಕ್ಕೆ ಬ್ರಹ್ಮ ಬೈದರ್ಕಳ ಗರಡಿ ಇಳಿಯುವುದು, ರಾತ್ರಿ ಗಂಟೆ 12.00ಕ್ಕೆ ಮಾನಿಬಾಲೆ ಗರಡಿ ಇಳಿಯುವುದು, ಬೆಳಗ್ಗೆ ಗಂಟೆ 5.00ಕ್ಕೆ ಕೋಟಿ-ಚೆನ್ನಯ್ಯರ ದರ್ಶನ(ಸೇಟು), ಬೆಳಗ್ಗೆ ಗಂಟೆ 6.00ಕ್ಕೆ ಗಂಧಪ್ರಸಾದ ವಿತರಣೆ ನಡೆಯಲಿದೆ. ಈ ಪ್ರಯುಕ್ತ ಭಕ್ತಾಭಿಮಾನಿಗಳು ಬಂದು ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ, ಶ್ರೀ ಬ್ರಹ್ಮಬೈದೇರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ಆಡಳಿತದಾರರಾದ ಎಂ.ಕೃಷ್ಣಪ್ಪ ಪೂಜಾರಿ ಯವರು ವಿನಂತಿಸಿದ್ದಾರೆ.
- Sunday
- November 24th, 2024