ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಪ್ರಾರಂಭವಾಗಿದ್ದು,
ಫೆ.20 ರಂದು ಬೆಳಿಗ್ಗೆ 9:00 ಗಂಟೆಯಿಂದ ಹಸಿರು ಕಾಣಿಕೆ ಮೆರವಣಿಗೆ ನಡೆಯಿತು. ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 12:30 ರಿಂದ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ರಾತ್ರಿ 8:00 ಗಂಟೆಗೆ ಮಹಾಪೂಜೆ, ರಾತ್ರಿ 8:15 ರಿಂದ ಅನ್ನಸಂತರ್ಪಣೆ ನಡೆಯಿತು.
ಸಂಜೆ 6:00 ಗಂಟೆಯಿಂದ 8:30 ರವರೆಗೆ ಬ್ರಹ್ಮಕುಮಾರಿ ಸಂಸ್ಥೆ ಸುಳ್ಯ ಆಯೋಜನೆಯ ಮಹಿಳಾ ತಂಡದವರಿಂದ ಶಿವ ಅವತಾರ ಯಕ್ಷಗಾನ ತಾಳಮದ್ದಳೆ ನಡೆಯಿತು. ನಂತರ ರಾತ್ರಿ 8:30 ರಿಂದ 9:15 ರವರೆಗೆ ವಸಂತ ಆಚಾರ್ಯ ಸಾರಥ್ಯದ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್-ಕಟ್ಟ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ವೈಭವ ನಡೆಯಿತು. ನಂತರ ರಾತ್ರಿ 9:15 ರಿಂದ 11:15 ರವರೆಗೆ ಲಾಸ್ಯ ಕಲಾ ಶಾಲೆ ಗುತ್ತಿಗಾರು ಹಾಗೂ ಕ್ರೇಜಿಗೈಸ್ ಬೆಳ್ಳಾರೆ ಇವರಿಂದ ನೃತ್ಯಾರ್ಪಣಂ ಕಾರ್ಯಕ್ರಮ ನಡೆಯಿತು. ನಂತರ ರಾತ್ರಿ 11:30 ರಿಂದ ಕುಮಾರಿ ಬ್ರಾಹ್ಮಿ ಬಳಕ್ಕಜೆ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ನಂತರ ಫೆ.21 ರಂದು ಬೆಳಿಗ್ಗೆ 6:00 ಗಂಟೆಯಿಂದ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ ನಡೆಯಿತು. ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 6:30 ಕ್ಕೆ ದೀಪಾರಾಧನೆ, ಚೆಂಡೆವಾದನ, ರಾತ್ರಿ 7:30 ಕ್ಕೆ ಮಹಾಪೂಜೆ, ರಾತ್ರಿ 8:00 ಗಂಟೆಯಿಂದ ದೇವರಬಲಿ ಉತ್ಸವ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ.
ಬೆಳಿಗ್ಗೆ 6:00 ಗಂಟೆಯಿಂದ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ಪ್ರಾರಂಭವಾಗಿದ್ದು, ಸಂಜೆ 6:00 ಗಂಟೆಗೆ ಮುಕ್ತಾಯಗೊಳ್ಳಲಿದೆ. ನಂತರ ಸಂಜೆ 6:00 ಗಂಟೆಯಿಂದ ಬಾಲಚಂದ್ರ ಪೆರಾಜೆ ಇವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಲಿದೆ.
ನಂತರ ಫೆ.22 ರಂದು ಬೆಳಿಗ್ಗೆ 6:00 ಗಂಟೆಯಿಂದ ಸಾಯಂಕಾಲದ ತನಕ ಉಳ್ಳಾಗುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ವರದಿ :- ಉಲ್ಲಾಸ್ ಕಜ್ಜೋಡಿ