ಶಿಕ್ಷಕರ ಸಹಕಾರ ಸಂಘ ಕಡಬ ಇದರ ನೂತನ ಶಾಖೆಯು ನಿಂತಿಕಲ್ಲಿನಲ್ಲಿ ಫೆ. 19 ರಂದು ನಿಂತಿಕಲ್ಲು ಸಾನಿಧ್ಯ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತು. ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಯ ಸಂಚಾಲಕ ಹಾಗೂ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ ಯವರು ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಸಹಕಾರಿ ಸಂಘಗಳ ಬಗ್ಗೆ ವಿವರಿಸಿ ಶುಭ ಹಾರೈಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಸಭಾಧ್ಯಕ್ಷತೆ ವಹಿಸಿ, ಸಂಘ ಬೆಳೆದು ಬಂದ ಬಗ್ಗೆ ಪ್ರಸ್ತಾವನೆಗೈದರು. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹಾದೇವ ಲಾಂಛನ ಬಿಡುಗಡೆ ಮಾಡಿದರು. ಪುತ್ತೂರು ಶಿಕ್ಷಣಾಧಿಕಾರಿ ಲೋಕೇಶ್ ಸಿ. ಪ್ರಥಮ ಠೇವಣಿ ಪತ್ರ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಎಣ್ಮೂರು ಪ್ರೌಢಶಾಲಾ ಮುಖ್ಯಶಿಕ್ಷಕಿ ಶೀತಲ್ ಯು.ಕೆ., ಮಂಗಳೂರು ಲೆಕ್ಕಪರಿಶೋಧಕ ವೆಂಕಟ್ರಮಣ ಎಂ., ನಿವೃತ್ತ ಉಪತಹಶೀಲ್ದಾರ್ ಜನಾರ್ದನ ಪೂಜಾರಿ ಅಲೆಕ್ಕಾಡಿ, ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ವಾಸುದೇವ ನಡ್ಕ, ಮಯೂರ ಜ್ಯುವೆಲ್ಲರ್ ಮಾಲಕ ದೀಕ್ಷಿತ್ ಬೆಳ್ಳಾರೆ, ಸುಳ್ಯ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ, ಕಡಬ ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ನೂಜಾಡಿ, ಸಾನಿಧ್ಯ ಸಂಕೀರ್ಣದ ಮಾಲಕ ತಿಮ್ಮಪ್ಪಗೌಡ ಮಲ್ಲಾರ, ಡಿಸಿಸಿ ಬ್ಯಾಂಕ್ ನ ನಿವೃತ್ತ ಅಧಿಕಾರಿ ಕುಸುಮಾಧರ ವೇದಿಕೆಯಲ್ಲಿದ್ದರು. ಸಂಘದ ಶಿಕ್ಷಕ ಶಿಕ್ಷಕಿಯರು ಠೇವಣಿದಾರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಪುರಂದರ ಗೌಡ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಅಂಬಿಕಾ ಎನ್ ಪ್ರಾರ್ಥಿಸಿದರು . ನಿರ್ದೇಶಕ ಜಿ. ಮಾಯಿಲಪ್ಪ ವಂದಿಸಿದರು. ನಿರ್ದೇಶಕ ಎಂ. ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.