
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ವತಿಯಿಂದ ಚೆನ್ನಕೇಶವ ಸಭಾಂಗಣದಲ್ಲಿ ಶಿವಾಜಿ ಮಹಾರಾಜ್ ಜಯಂತಿ ಕಾರ್ಯಕ್ರಮ ಫೆ.20 ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಾಗೇಶ್ ಮಣಿಯಾನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷತೆಯನ್ನು ಕುಲದೀಪ್ ಪೆಲ್ತಡ್ಕ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಸಹ ಸಂಚಾಲಕ ರವೀಶ್ ಕೇವಳ ,ಅಧ್ಯಯನ ವೃತ್ತ ಪ್ರಮುಖ್ ಹಿತೇಶ್, ಹಾಸ್ಟೆಲ್ ಪ್ರಮುಖ್ ರಾದ ಸೂರಜ್, ಸಾಮಾಜಿಕ ಜಾಲತಾಣ ಪ್ರಮುಖ್ ನಿರ್ದೇಶ್, ಕಾರ್ಯಕಾರಣಿ ಸದಸ್ಯರಾದ ಭೂಮಿಕ, ಕೀರ್ತಿ, ಆತ್ಮಿಕ ಸೇರಿದಂತೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಉಪಸ್ಥಿತರಿದ್ದರು.