ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಫೆ.16 ಮತ್ತು 17 ರಂದು ಶ್ರೀ ಕೊರಗಜ್ಜ ದೈವದ ನರ್ತನ ಸೇವೆ ನಡೆಯಿತು.
ಫೆ.16 ಬುಧವಾರ ಸಂಜೆ 5:00 ಗಂಟೆಯಿಂದ ಶ್ರೀ ಮಾತಾ ಅಮೃತ ಕುಟುಂಬ ಏನೆಕಲ್ಲು ಇವರಿಂದ ಭಜನಾ ಕಾರ್ಯಕ್ರಮಗಳು ನಡೆಯಿತು. ನಂತರ ಕಲ್ಲುರ್ಟಿ ದೈವದ ಭಂಡಾರ ತೆಗೆಯುವುದು ಹಾಗೂ ರಾತ್ರಿ ಕಲ್ಲುರ್ಟಿ ದೈವದ ನರ್ತನ ಸೇವೆ ಮತ್ತು ಅದೇ ದಿನ ರಾತ್ರಿ ಶ್ರೀ ಮಂತ್ರವಾದಿ ಗುಳಿಗ ದೈವದ ನರ್ತನ ಸೇವೆ ನಡೆಯಿತು.
ಫೆ.17 ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನರ್ತನ ಸೇವೆ,ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಪೆರ್ಲಂಪಾಡಿಯ ಮಗುವೊಂದು ಅಸೌಖ್ಯತೆಯಿಂದಿದ್ದು, ಆಸ್ಪತ್ರೆಯಲ್ಲಿ ಗುಣಮುಖವಾಗದ ಸಂದರ್ಭದಲ್ಲಿ ಇಲ್ಲಿನ ಕೊರಗಜ್ಜನಿಗೆ ಹರಕೆ ಹೇಳಿದ್ದರು. ಅದರಂತೆ ಹರಕೆ ಹೇಳಿದ 24 ಗಂಟೆಯೊಳಗೆ ಮಗು ಗುಣಮುಖವಾಗಿ ಆರೋಗ್ಯವಾಗಿದೆ. ಹರಕೆ ಪೂರೈಸಲು ನರ್ತನ ಸೇವೆಯ ದಿನ ಕೊರಗಜ್ಜನ ಕೈಗೆ ಆ ಮಗುವನ್ನು ಕೊಟ್ಟು ಪ್ರಸಾದ ಸ್ವೀಕರಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ