ಹರಿಹರಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಳದಲ್ಲಿ ಫೆ.20 ರಿಂದ 22 ರವರೆಗೆ ನಡೆಯುವ ಜಾತ್ರೋತ್ಸವ ಮತ್ತು ಇತರ ಸಂದರ್ಭದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ವ್ಯವಹಾರಕ್ಕೆ ಅವಕಾಶ ನೀಡದಂತೆ ಮತ್ತು ದೇವಳದಲ್ಲಿ ಏಕರೂಪ ವಸ್ತ್ರಸಂಹಿತೆ ಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಸಮಿತಿ ವತಿಯಿಂದ ದೇವಳದ ಅಭಿವೃದ್ಧಿ ಸಮಿತಿ ಸಂಚಾಲಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದು ಯುವವಾಹಿನಿ ಸಂಚಾಲಕ ನಿಶಿತ್ ನಡುಗಲ್ಲು,ಯುವ ವಾಹಿನಿ ಪ್ರಮುಖ್ ಸುರೇಶ್ ಸುಬ್ರಹ್ಮಣ್ಯ , ಘಟಕ ಕಾರ್ಯದರ್ಶಿ ವಿನೋದ್ ಕುಲ್ಕುಂದ ಉಪಸ್ಥಿತರಿದ್ದರು.
- Saturday
- November 23rd, 2024