ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸುಬ್ರಹ್ಮಣ್ಯ ಶಾಖೆಯ ಉದ್ಘಾಟನೆಯು ಫೆ. 17 ರಂದು ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಪಿ. ಸಿ. ಜಯರಾಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಶ್ರೀಕೃಪಾ ಕಾಂಪ್ಲೆಕ್ಸ್ ನಲ್ಲಿ ಸಂಘದ 16ನೇ ಶಾಖೆಯು ಕಾರ್ಯಾರಂಭ ಮಾಡಲಿದೆ. ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ ಪ್ರವರ್ತಿಸಲ್ಪಟ್ಟಿರುವ ಸಂಘವು 1997ರಲ್ಲಿ ಪ್ರಾರಂಭಗೊಂಡು ರಾಜ್ಯದ ವಿವಿಧ ಭಾಗಗಳಲ್ಲಿ 15 ಶಾಖೆಗಳನ್ನು ಹೊಂದಿದೆ.
ನೂತನ 16ನೇ ಸುಬ್ರಹ್ಮಣ್ಯ ಶಾಖೆಯ ಉದ್ಘಾಟನೆಯನ್ನು ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರು ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ.ಯವರು ನೆರವೇರಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ. ಸಿ. ಜಯರಾಮ ವಹಿಸಲಿದ್ದಾರೆ. ಗಣಕೀಕರಣದ ಉದ್ಘಾಟನೆಯನ್ನು ಮಾಜಿ ಜಿ ಪಂ ಸದಸ್ಯೆ ಆಶಾ ತಿಮ್ಮಪ್ಪ ನೆರವೇರಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ವಿಶ್ರಾಂತ ಪ್ರಾಂಶುಪಾಲ ಹಾಗೂ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ ಆರ್ ಶೆಟ್ಟಿಗಾರ್ ಉದ್ಘಾಟಿಸಲಿದ್ದಾರೆ.ಪ್ರಥಮ ಠೇವಣಿ ಪತ್ರವನ್ನು ಐನೆಕಿದು ಸುಬ್ರಹ್ಮಣ್ಯ ವ್ಯವಸಾಯಿಕ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು ನೆರವೇರಿಸಲಿದ್ದು, ಪ್ರಥಮ ಪಾಲು ಪತ್ರ ವಿತರಣೆಯನ್ನು ಸುಳ್ಯ ತಾಲ್ಲೂಕು ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ಸುಬ್ರಹ್ಮಣ್ಯ ಇದರ ಅಧ್ಯಕ್ಷೆ ರಾಜೀವಿ ಆರ್ ರೈ ನೆರವೇರಿಸಲಿದ್ದಾರೆ. ಪ್ರಥಮ ಸಾಲಪತ್ರದ ಮಂಜೂರಾತಿಯನ್ನು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ ವಿತರಿಸಲಿದ್ದು, ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕ ಹಾಗೂ ಶ್ರೀಕೃಪಾ ಕಾಂಪ್ಲೆಕ್ಸ್ ಮಾಲಕ ಸಿ. ದೊಡ್ಡಣ್ಣಗೌಡ, ಏನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಭರತ್ ನೆಕ್ರಾಜೆ ಉದ್ಯಮಿ ಹಾಗೂ ಕಲಾವಿದ ಯಜ್ನೇಶ್ ಆಚಾರ್ಯ, ಸುಬ್ರಹ್ಮಣ್ಯ ಕುಮಾರಸ್ವಾಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಗಣೇಶ್ ನಾಯರ್, ಶುಭಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ದಿನೇಶ್ ಬಿ. ಎನ್. ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಟಿ. ವಿಶ್ವನಾಥ, ನಿರ್ದೇಶಕರಾದ ಚಂದ್ರಾ ಕೋಲ್ಚಾರ್, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ, ದಾಮೋದರ ಎನ್.ಎಸ್., ಹೇಮಚಂದ್ರ ಐ.ಕೆ. ಉಪಸ್ಥಿತರಿದ್ದರು.
- Thursday
- November 21st, 2024