
ಕಲ್ಮಡ್ಕ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಪುಸ್ತಕ ಗೂಡಿನ ಉದ್ಘಾಟನಾ ಕಾರ್ಯಕ್ರಮವು ಫೆಬ್ರವರಿ 14 ರಂದು ನಡೆಯಿತು.
ಬಸ್ ನಿಲ್ದಾಣದ ಪುಸ್ತಕ ಗೂಡಿನ ಉದ್ಘಾಟನೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹಾಜಿರಾ ಗಫೂರ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಪಿ.ಡಿ.ಓ ಪ್ರವೀಣ್ ಚಿಲ್ಪಾರ್ ಸಿ.ವಿ, ಸದಸ್ಯರುಗಳಾದ ಲೋಕೇಶ್ ಆಕ್ರಿಕಟ್ಟೆ, ಹರೀಶ್ ಎಂ, ಲೋಕಯ್ಯ ನಾಯ್ಕ, ಪವಿತ್ರಾ ಕುಧ್ವ, ಮೋಹಿನಿ ಎಂ, ಮೀನಾಕ್ಷಿ ಕೆ, ಜಯಲತಾ ಕೆ.ಡಿ ಗ್ರಾ.ಪಂ ಕಾರ್ಯದರ್ಶಿ ಗೋಪಾಲಕೃಷ್ಣ ಕೆ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.