ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಮತ್ತು 16 ರಂದು ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಿತು.
ಫೆ.15 ಮಂಗಳವಾರದಂದು ಪ್ರಾತಃಕಾಲ 6:00 ಗಂಟೆಗೆ ಆಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ 9:30 ಕ್ಕೆ ಗಣಪತಿ ಹೋಮ, ಬೆಳಿಗ್ಗೆ 10:00 ಗಂಟೆಗೆ ಉಗ್ರಾಣ ಮಹೂರ್ತ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6:00 ಗಂಟೆಗೆ ಸ್ಥಾನದಿಂದ ಭಂಡಾರ ತೆಗೆಯುವುದು, ಸಂಜೆ 6:45 ಕ್ಕೆ ತೊಡಂಙಲ್, ರಾತ್ರಿ 7:00 ಗಂಟೆಗೆ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ 8:30 ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ನಂತರ ರಾತ್ರಿ 9:30 ರಿಂದ ಅನ್ನಸಂತರ್ಪಣೆ, ರಾತ್ರಿ 11:00 ಗಂಟೆಯಿಂದ ಶ್ರೀ ದೈವದ ಕುಳ್ಚಾಟ ಹಾಗೂ ರಾತ್ರಿ 12:00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಫೆ.16 ಬುಧವಾರದಂದು ಬೆಳಿಗ್ಗೆ 4:30 ಕ್ಕೆ ಶ್ರೀ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ 6:30 ಕ್ಕೆ ಶ್ರೀ ದೈವದ ಬಾರಣೆ, ಬೆಳಿಗ್ಗೆ 7:00 ಗಂಟೆಗೆ ಮಾರಿಕಳ, ಬೆಳಿಗ್ಗೆ 8:00 ಗಂಟೆಗೆ ಗುಳಿಗ ನೇಮ ಹಾಗೂ ಬೆಳಿಗ್ಗೆ 9:00 ಗಂಟೆಗೆ ಪ್ರಸಾದ ವಿತರಣೆ ನಡೆದು ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಸಂಪನ್ನಗೊಂಡಿತು.
ವರದಿ :- ಉಲ್ಲಾಸ್ ಕಜ್ಜೋಡಿ