ಹರಿಹರಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಫೆ. 20 ರಿಂದ 22 ರ ವರೆಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ ಜರಗಲಿದೆ. ಫೆ.20 ರಂದು ಬೆಳಿಗ್ಗೆ 9:00 ಗಂಟೆಯಿಂದ ಹಸಿರು ಕಾಣಿಕೆ ಪ್ರಾರಂಭ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 12:30 ರಿಂದ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ರಾತ್ರಿ 8:00 ಗಂಟೆಗೆ ಮಹಾಪೂಜೆ, ರಾತ್ರಿ 8:15 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6:00 ಗಂಟೆಯಿಂದ 8:30 ರವರೆಗೆ ಬ್ರಹ್ಮಕುಮಾರಿ ಸಂಸ್ಥೆ ಸುಳ್ಯ ಆಯೋಜನೆಯ ಮಹಿಳಾ ತಂಡದವರಿಂದ ಶಿವ ಅವತಾರ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ನಂತರ ರಾತ್ರಿ 8:30 ರಿಂದ 9:15 ರವರೆಗೆ ವಸಂತ ಆಚಾರ್ಯ ಸಾರಥ್ಯದ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್-ಕಟ್ಟ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ವೈಭವ ನಡೆಯಲಿದ್ದು, ನಂತರ ರಾತ್ರಿ 9:15 ರಿಂದ 11:15 ರವರೆಗೆ ಲಾಸ್ಯ ಕಲಾ ಶಾಲೆ ಗುತ್ತಿಗಾರು ಹಾಗೂ ಕ್ರೇಜಿಗೈಸ್ ಬೆಳ್ಳಾರೆ ಇವರಿಂದ ನೃತ್ಯಾರ್ಪಣಂ ಕಾರ್ಯಕ್ರಮ ನಡೆಯಲಿದ್ದು, ನಂತರ ರಾತ್ರಿ 11:30 ರಿಂದ ಕುಮಾರಿ ಬ್ರಾಹ್ಮಿ ಬಳಕ್ಕಜೆ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಫೆ.21 ರಂದು ಬೆಳಿಗ್ಗೆ 6:00 ಗಂಟೆಯಿಂದ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 6:30 ಕ್ಕೆ ದೀಪಾರಾಧನೆ, ಚೆಂಡೆವಾದನ, ರಾತ್ರಿ 7:30 ಕ್ಕೆ ಮಹಾಪೂಜೆ, ರಾತ್ರಿ 8:00 ಗಂಟೆಯಿಂದ ದೇವರಬಲಿ ಉತ್ಸವ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ. ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿವಿಧ ಭಜನಾ ತಂಡಗಳಾದ ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಹರಿಹರ ಪಲ್ಲತ್ತಡ್ಕ, ಶ್ರೀ ದೇವಿ ಭಜನಾ ಮಂಡಳಿ ಬೆಟ್ಟುಮಕ್ಕಿ ಬಾಳುಗೋಡು, ಶ್ರೀ ದೇವಿ ಭಜನಾ ಮಂಡಳಿ ಬಾಳುಗೋಡು, ಶ್ರೀ ವಿವೇಕ ಜಾಗೃತ ಬಳಗ ಹರಿಹರ ಪಲ್ಲತ್ತಡ್ಕ ಸುಬ್ರಹ್ಮಣ್ಯ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಜಪಿಲ ಬೆಳ್ಳಾರೆ, ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಬಿಳಿನೆಲೆ, ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಸುಳ್ಯ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ ಬೀದಿಗುಡ್ಡೆ, ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು, ಶ್ರೀ ವಿದ್ಯಾಸಾಗರ ಭಜನಾ ಮಂಡಳಿ ಸುಬ್ರಹ್ಮಣ್ಯ, ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಹರಿಹರ ಪಲ್ಲತ್ತಡ್ಕ, ಶ್ರೀ ಕೃಷ್ಣ ಭಜನಾ ಮಂಡಳಿ ಬಿಳಿನೆಲೆ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6:00 ಗಂಟೆಯಿಂದ ಬಾಲಚಂದ್ರ ಪೆರಾಜೆ ಇವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಲಿದೆ.
ಫೆ.22 ರಂದು ಬೆಳಿಗ್ಗೆ 6:00 ಗಂಟೆಯಿಂದ ಸಾಯಂಕಾಲದ ತನಕ ಉಳ್ಳಾಗುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ವರದಿ :- ಉಲ್ಲಾಸ್ ಕಜ್ಜೋಡಿ