
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಬಿ.ಸಿ. ಟ್ರಸ್ಟ್.(ರಿ) ಗುತ್ತಿಗಾರು ವಲಯದ ಬಳ್ಪ ಗ್ರಾಮದ ಸೇವಾಕೇಂದ್ರದಲ್ಲಿ ಗ್ರಾಹಕ ಡಿಜಿಟಲ್ ಸೇವಾಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಹೊಪ್ಪಾಳೆ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.ಕೆನರಾ ಬ್ಯಾಂಕ್ ಬಳ್ಪ ಶಾಖೆಯ ಮ್ಯಾನೇಜರ್ ಆಗಿರುವ ಆಶಿಶ್ ರಂಜನ್ ಲ್ಯಾಪ್ ಟಾಪ್ ಹಸ್ತಾಂತರಿಸಿದರು. ವಲಯ ಮೇಲ್ವಿಚಾರಕ ಮುರಳೀಧರ ರವರು ಸರಕಾರದ ಹಾಗೂ ಯೋಜನೆ ಕಾರ್ಯಕ್ರಮ ಕ್ರಮಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶೈಲಜಾ ಎಣ್ಣೆಮಜಲು, ಪ್ರಗತಿಪರ ಕೃಷಿಕರಾದ ಜಗನ್ನಾಥ ಪಲ್ಲತ್ತಡ್ಕ, ಡಿಜಿಟಲ್ ಸೇವಾ ಕೇಂದ್ರದ ತಾಲ್ಲೂಕಿನ ನೋಡೆಲ್ ಅಧಿಕಾರಿಯಾಗಿರುವ ಪ್ರಶಾಂತ್ , ಒಕ್ಕೂಟದ ಪದಾಧಿಕಾರಿಗಳಾದ ಪುಷ್ಪಾವತಿ ,ರೇಷ್ಮ ಪ್ರಸಾದ್ ,ಸೇವಾಪ್ರತಿನಿಧಿಗಳಾದ ಶ್ರೀಮತಿ ಭವ್ಯ ,ಕುಮಾರಿ ಚೈತನ್ಯ ಉಪಸ್ಥಿತರಿದ್ದರು.