Ad Widget

ಫೆ.12-ಫೆ.18: ಎಡಮಂಗಲ ಜಾತ್ರೋತ್ಸವ- ಧ್ವಜಾರೋಹಣದೊಂದಿಗೆ ವಾರ್ಷಿಕ ಜಾತ್ರೋತ್ಸವ ಆರಂಭ, ಬಲಿ ಉತ್ಸವ, ರಂಗಪೂಜೆ

ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.12ರಂದು(ಇಂದು) ಧ್ವಜಾರೋಹಣದೊಂದಿಗೆ ಆರಂಭಗೊಂಡಿದೆ. ಧ್ವಜಾರೋಹಣದ ಬಳಿಕ ಬಲಿ ಹೊರಟು ಉತ್ಸವ, ಶ್ರೀ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

. . . . . . .

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಶ್ರೀಹರಿ ಭಟ್ ನೂಚಿಲ, ಪ್ರಧಾನ ಅರ್ಚಕರಾದ ಶ್ರೀ ಸೀತಾರಾಮಯ್ಯ ನೂಚಿಲ, ವ್ಯವಸ್ಥಾಪನ ಸಮಿತಿಯ ಶ್ರೀ ರಾಮಕೃಷ್ಣ ರೈ ಮಾಲೆಂಗ್ರಿ, ಶ್ರೀಮತಿ ಭವಾನಿ ಚಂದ್ರಶೇಖರ ಪರ್ಲ, ಶ್ರೀ ಗಿರೀಶ್ ನಡುಬೈಲು, ಶ್ರೀ ರವೀಂದ್ರ ದೇರಳ, ಶ್ರೀ ದೇವಿಪ್ರಸಾದ್ ದೋಳ್ಪಾಡಿ, ಶ್ರೀ ಬಾಲಕೃಷ್ಣ ಬಳಕ್ಕಬೆ, ಶ್ರೀಮತಿ ಪ್ರಿಯಾಂಕ ಪದ್ಮನಾಭ ಪುಂಣ್ಚತ್ತಡಿ ಹಾಗೂ ಅರ್ಚಕರು, ಸಹಾಯಕರು, ಭಂಡಾರದ ಕರಣಿಕರು ಮತ್ತು ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ಜಾತ್ರೋತ್ಸವವು ಫೆ.18ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಪ್ರಯುಕ್ತ ಫೆ.13 ಆದಿತ್ಯವಾರದಂದು ರಾತ್ರಿ ಗಂಟೆ 7.30ರಿಂದ ಬಲಿ ಹೊರಟು ಉತ್ಸವ ಮತ್ತು ತರವಾಡು ಮಾಲೆಂಗ್ರಿ ಪಿಲಿಕುಂಜ ಸ್ಥಾನದಿಂದ ಶ್ರೀ ಮಹಾಲಿಂಗರಾಯ ದೈವದ ಭಂಡಾರ ಬಂದು ಓಲೆ ಸವಾರಿ, ಹೊಸಮಜಲು ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಶ್ರೀ ನೇಲ್ಯಾರು ನೇಮ ಹಾಗೂ ಉಳ್ಳಾಲ್ತಿ ನೇಮೋತ್ಸವ ಜರುಗಲಿದೆ. ಫೆ.14 ಸೋಮವಾರದಂದು ಬೆಳಗ್ಗೆ 9.30ರಿಂದ ಬಲಿ ಹೊರಟು ಉತ್ಸವ “ಶ್ರೀ ದೇವರ ದರ್ಶನ ಬಲಿ”, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ ವಸಂತ ಕಟ್ಟೆಯಲ್ಲಿ ಪೂಜೆ ನಡೆಯಲಿದೆ. ಫೆ.15 ಮಂಗಳವಾರದಂದು ಬೆಳಗ್ಗೆ 9.30ರಿಂದ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 7.00ರಿಂದ ಬಲಿ ಹೊರಟು ಉತ್ಸವ ಬಲಿಯೊಂದಿಗೆ ಕೋಲಾಟ, ಮಹಾರಥೋತ್ಸವ ಪಾಟಾಳಿ ಕಟ್ಟೆ ಪೂಜೆ ಮತ್ತು ಮರೋಳಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಉದ್ರಾಂಡಿ ದೈವಗಳ ಓಲೆ ಸವಾರಿ ನಡೆಯಲಿದೆ. ನಂತರ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಭೂತಬಲಿ ಮತ್ತು “ಶ್ರೀ ದೇವರ ಶಯನೋತ್ಸವ” ನೆರವೇರಲಿದೆ. ಫೆ.16 ಬುಧವಾರದಂದು ಬೆಳಗ್ಗೆ ಕವಾಟೋದ್ಘಾಟನೆ, ತೈಲಾಭಿಷೇಕ, ಪಂಚಾಮೃತಾಭಿಷೇಕ ನಡೆಯಲಿದ್ದು, ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ, ಮಿತ್ತೂರು ನಾಯರ್ ದೈವದ ನೇಮ, ರಾತ್ರಿ ಬಲಿ ಹೊರಟು ವಸಂತ ಕಟ್ಟೆಯಲ್ಲಿ ಸಾರ್ವಜನಿಕ ಕಟ್ಟೆಪೂಜೆ, ಬಿಲ್ವಪತ್ರೆ ಕಟ್ಟೆಯಲ್ಲಿ ಕಟ್ಟೆಪೂಜೆ ನಂತರ ನೂಚಿಲ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಕಟ್ಟೆಪೂಜೆ ಹಾಗೂ ಕುಮಾರಧಾರ ಭಂಡಾರಗಯದಲ್ಲಿ “ಅವಭೃತಸ್ನಾನ”, ಧ್ವಜ ಅವರೋಹಣ ನಡೆಯಲಿರುವುದು. ಫೆ.17 ಗುರುವಾರದಂದು ಬೆಳಗ್ಗೆ ಗಂಟೆ 9.00ರಿಂದ ಗಣಪತಿ ಹವನ, ಕಲಶ ಪೂಜೆ, ರುದ್ರಾಭಿಷೇಕ, ಕಲಶಾಭಿಷೇಕ, ಮಹಾಪೂಜೆ, “ಮಂತ್ರಾಕ್ಷತೆ”, ಪ್ರಸಾದ ವಿತರಣೆ ನಡೆದು “ಮಹಾ ಅನ್ನಸಂತರ್ಪಣೆ” ನಡೆಯಲಿದೆ. ಫೆ.18 ಶುಕ್ರವಾರದಂದು ಬೆಳಗ್ಗೆ ಮರೋಳಿ ಶಿರಾಡಿ ರಾಜನ್ ದೈವದ ಭಂಡಾರ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ ನೆರವೇರಲಿದೆ. ಫೆ.13ರಿಂದ ಫೆ.15ರ ವರೆಗೆ ಪ್ರತಿನಿತ್ಯ ರಾತ್ರಿ 7.00ರಿಂದ 10.30ರ ವರೆಗೆ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ.15 ಮಂಗಳವಾರದಂದು ಶ್ರೀ ಲಕ್ಷ್ಮಣ ಆಚಾರ್ಯ ಬಳಗದವರಿಂದ ಕೀಲುಕುದುರೆ ಮತ್ತು ಬೊಂಬೆಯಾಟ ಕಾರ್ಯಕ್ರಮ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!