ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.12ರಿಂದ ಫೆ.16ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಇಂದು(ಫೆ.12) ಬೆಳಗ್ಗೆ ಉಗ್ರಾಣ ಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಸುನಿಲ್ ರೈ ಪುಡ್ಕಜೆ,
ಅರ್ಚಕರಾದ ಉದಯಕುಮಾರ.ಕೆ.ಟಿ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಹಾಗೂ ನಾಗೇಶ್ ಕುಲಾಲ್ ತಡಗಜೆ, ದೇವಸ್ಥಾನದ ಕಛೇರಿ ನಿರ್ವಾಹಕ ಮಹೇಶ್.ಕೆ ಕಲ್ಪನೆ, ಪ್ರದೀಪ್ ಕುಮಾರ್ ರೈ ಪನ್ನೆ, ವಿಠಲ್ ರೈ, ಮತ್ತಿತರರು ಉಪಸ್ಥಿತರಿದ್ದರು.
ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಇಂದು(ಫೆ.12) ಸಂಜೆ 5.30ಕ್ಕೆ ತಂತ್ರಿಗಳ ಆಗಮನ, ಸ್ವಾಗತ, ಪ್ರಾರ್ಥನೆ, ದೀಪಾರಾಧನೆ, ರಾತ್ರಿ 7.00ಕ್ಕೆ ಧ್ವಜಾರೋಹಣ, ಬಯನ ಬಲಿ, ರಾತ್ರಿ ಪೂಜೆ, ನೃತ್ಯ ಬಲಿ ನಡೆಯಲಿದೆ. ಫೆ.13 ಆದಿತ್ಯವಾರದಂದು ಬೆಳಗ್ಗೆ 7.00ಕ್ಕೆ ಗಣಪತಿ ಹವನ, ಉಷಾಃಪೂಜೆ, ಬೆಳಗ್ಗೆ 8.00ಕ್ಕೆ ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಶಿವೇಲಿ, ಅನ್ನಪ್ರಸಾದ, ರಾತ್ರಿ 7.30ಕ್ಕೆ ಶಿವೇಲಿ, ದರ್ಶನ ಬಲಿ, ರಾತ್ರಿ ಗಂಟೆ 10.00ರಿಂದ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಫೆ.14 ಸೋಮವಾರದಂದು ಬೆಳಗ್ಗೆ 7.00ಕ್ಕೆ ಗಣಪತಿ ಹವನ, ಉಷಾಃಪೂಜೆ, ಬೆಳಗ್ಗೆ 8.00ಕ್ಕೆ ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಶಿವೇಲಿ, ಅನ್ನಪ್ರಸಾದ , ರಾತ್ರಿ 7.00ಕ್ಕೆ ರಾತ್ರಿ ಪೂಜೆ, ರಾತ್ರಿ 7.30ಕ್ಕೆ ನೃತ್ಯ ಬಲಿ ನಡೆಯಲಿರುವುದು. ಫೆ.15 ಮಂಗಳವಾರದಂದು ಬೆಳಗ್ಗೆ 7.00ಕ್ಕೆ ಗಣಪತಿ ಹವನ, ಉಷಾಃಪೂಜೆ, ಬೆಳಗ್ಗೆ 8.00ಕ್ಕೆ ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಶಿವೇಲಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.00ಕ್ಕೆ ಶ್ರೀ ಭೂತಬಲಿ, ಸೇವೆ ಸುತ್ತು, ಪೇಟೆ ಸವಾರಿ, ಸಿಡಿಮದ್ದು ಪ್ರದರ್ಶನ, ರಾತ್ರಿ 9.00ಕ್ಕೆ ರಾತ್ರಿ ಪೂಜೆ, ರಾತ್ರಿ 10.00ಕ್ಕೆ ಶಯನ, ಕವಾಟಬಂಧನ ನೆರವೇರಲಿದೆ. ಫೆ.16 ಬುಧವಾರದಂದು ಬೆಳಗ್ಗೆ 7.00ಕ್ಕೆ ಕವಾಟೋದ್ಘಾಟನೆ, ತೈಲಾಭ್ಯಂಜನ, ಬೆಳಗ್ಗೆ 8.00ಕ್ಕೆ ಉಷಾಃಪೂಜೆ, ಬೆಳಗ್ಗೆ 8.30ಕ್ಕೆ ಆರಾಟು ಬಲಿ, ಬೆಳಗ್ಗೆ 9.30ಕ್ಕೆ ಅವಭೃಥ ಸ್ನಾನ, ದರ್ಶನ ಬಲಿ ನಡೆದು ಮಧ್ಯಾಹ್ನ 11.30ಕ್ಕೆ ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ ನಡೆಯಲಿದೆ. ಬಳಿಕ ಧ್ವಜ ಅವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7.30ರಿಂದ ಅಗ್ನಿಗುಳಿಗ ದೈವದ ಭಂಡಾರ ತೆಗೆದು, ಭೂತಕೋಲ, ಬಟ್ಟಲು ಕಾಣಿಕೆ ನಡೆಯಲಿದೆ.