Ad Widget

ಸುಬ್ರಹ್ಮಣ್ಯ : ತರಕಾರಿ ಬೀಜ ವಿತರಣಾ ಕಾರ್ಯಕ್ರಮ – ತಾಳೆ ಕೃಷಿ ಮಾಹಿತಿ ಕಾರ್ಯಕ್ರಮ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ತೋಟಗಾರಿಕಾ ಇಲಾಖೆ ಸುಳ್ಯ ಇದರ ವತಿಯಿಂದ ಫೆ.11 ರಂದು ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಮತ್ತು ರೈತ ಉತ್ಪಾದಕ ಸಂಸ್ಥೆ ರಚಿಸುವ ಬಗ್ಗೆ ಮಾಹಿತಿ ಹಾಗೂ ತಾಳೆ ಬೆಳೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಲಲಿತಾ ಗುಂಡಡ್ಕ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೆಂಕಟೇಶ್.ಕೆ.ಆರ್ ಸ್ವಾಗತಿಸಿದರು. ಲತಾ ಸರ್ವೇಶ್ವರ್, ಸುಭಾಷಿಣಿ ಶಿವರಾಂ, ಭಾರತಿ ದಿನೇಶ್ ಇವರುಗಳು ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂಜ ನಿಯೋಜಿತ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಾದ ತೀರ್ಥಾನಂದ ಕೊಡೆಂಕಿರಿ ಹಾಗೂ ವಿನೋದ್ ಬೊಳ್ಮಲೆ, ಯೋಜನಾ ಸಹಾಯಕರಾದ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಾಳೆ ಬೆಳೆ ಕೃಷಿಕರಾದ ಆಶೋಕ್ ಪ್ರಭು ತಾಳೆ ಬೆಳೆ ಕೃಷಿ ಬಗ್ಗೆ ಮಾಹಿತಿ ನೀಡಿದರು. ಹಾಗೂ ತೀರ್ಥಾನಂದ ಕೊಡೆಂಕಿರಿ ಮತ್ತು ಆನಂದ್ ರೈತ ಉತ್ಪಾದಕ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು.
ರೈತರಿಗೆ ಪರಸ್ಪರ ಸಹಾಯ, ಜ್ಞಾನ ಹಂಚಿಕೆ, ಅನುಭವ ಹಂಚಿಕೆ ಮಾಡುವವರ ಜೊತೆಗೆ ಕ್ಷೇತ್ರ ನಿರ್ವಹಣೆಯನ್ನು ಸಬಲೀಕರಣಗೊಳಿಸುವ ಸೂಕ್ತ ತಂತ್ರಜ್ಞಾನವನ್ನು ಬಳಸುವ ಕೊಯ್ಲೋತ್ತರ ನಿರ್ವಹಣೆ ಹಾಗೂ ಸಂಗ್ರಹಣೆ ಮತ್ತು ಮೌಲ್ಯವರ್ಧನೆ ಇಳುವರಿ ಹೆಚ್ಚಿಸುವ ಹಾಗೂ ಒಟ್ಟಾರೆ ಉತ್ಪನ್ನವನ್ನು ವೃದ್ಧಿಗೊಳಿಸುವ, ಕೊಯ್ಲೋತ್ತರ ನಷ್ಟ ಕಡಿಮೆಗೊಳಿಸುವ ಹಾಗೂ ರಾಜ್ಯದಲ್ಲಿ ರೈತರನ್ನು ಒಗ್ಗೂಡಿಸಿ ಅದರ ಸಾಮರ್ಥ್ಯವನ್ನು ಬಲವರ್ಧಿಸಿ ಸಾಮೂಹಿಕವಾಗಿ ತಮ್ಮ ಉತ್ಪಾದನೆ ಹಾಗೂ ಮಾರುಕಟ್ಟೆ ಬಲಗಳನ್ನು ಹೆಚ್ಚಿಸಿ ಉತ್ಪಾದಕರ ಆರ್ಥಿಕ ಹಾಗೂ ಸಾಮಾಜಿಕ ಲಾಭಗಳನ್ನು ಹೆಚ್ಚಿಸಲು ರೈತ ಉತ್ಪಾದನಾ ಸಂಸ್ಥೆ ಪ್ರಾರಂಭಿಸುವುದು ಸೂಕ್ತ ಮಾರ್ಗವಾಗಿದೆ ಹಾಗೂ ಈ ರೈತ ಉತ್ಪಾದಕ ಸಂಸ್ಥೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮಾಹಿತಿ ನೀಡಿದ ನಂತರ ಆಸಕ್ತ ಕೃಷಿಕರನ್ನು ಐನೆಕಿದು ಗ್ರಾಮದ ದೇವಿಪ್ರಸನ್ನ ಕೂಜುಗೋಡು ಅವರ ತಾಳೆ ತೋಟಕ್ಕೆ ಕರೆದುಕೊಂಡು ಹೋಗಿ ತಾಳೆ ಬೆಳೆ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಮಾಹಿತಿ ನೀಡಲಾಯಿತು. ತಾಳೆ ಬೆಳೆ ಫೀಲ್ಡ್ ಆಫೀಸರ್ ರವಿಶಂಕರ್ ತಾಳೆ ಬೆಳೆ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ತೋಟಗಾರಿಕಾ ಇಲಾಖಾ ಅಧಿಕಾರಿ ಮಧುಶ್ರೀ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

. . . . . . .

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!