ವಿದ್ಯಾರ್ಥಿ ಸಮುದಾಯ ವಿದ್ಯಾಭ್ಯಾಸ ಮಾಡುವ ಬದಲಿಗೆ ರಾಜಕೀಯ ಕಾರಣಗಳಿಂದ ವೈಮನಸ್ಸು ಬೆಳೆಯುತ್ತಿರುವುದು ಅಪಾಯಕಾರಿ. ಅಲ್ಲದೇ ಧ್ವಜ ಸ್ತಂಭದ ಮೇಲೆ ರಾಷ್ಟ್ರ ಧ್ವಜ ಮಾತ್ರ ಹಾರಿಸಬೇಕೆ ಹೊರತು ಕೇಸರಿ ಧ್ವಜಗಳನ್ನು ಅಲ್ಲ. ಅಂತಹ ಕೃತ್ಯಗಳನ್ನು ನಡೆಸಿದವರ ಮೇಲೆ ಪೋಲಿಸರು ಕೇಸು ದಾಖಲಿಸಬೇಕು ಎಂದು ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದರು.
ಅವರು ಫೆ.11ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಗತ್ಯವಿರದಂತ ವಿಷಯಗಳಿಗೆ ಯಾವುದೇ ರಾಜಕೀಯ ಪಕ್ಷ ಹೋಗಬಾರದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಾಂಗ್ರೆಸ್ ಮುಖಂಡರಾದ ನಂದರಾಜ ಸಂಕೇಶ್ ಉಪಸ್ಥಿತರಿದ್ದರು. ಪಿ. ಎಸ್ ಗಂಗಾಧರ ಸ್ವಾಗತಿಸಿ, ವಂದಿಸಿದರು.
- Tuesday
- December 3rd, 2024