

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಸ್ಕೌಟ್ಸ್ ಮತ್ತು ಗೈಡ್ಸ್ ನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಬಗೆಬಗೆಯ ಸುಮಾರು 70 ಬಗೆಯ ಪೌಷ್ಟಿಕ ಆಹಾರಯುಕ್ತ ಖಾದ್ಯಗಳನ್ನು ತಯಾರಿಸಿ ಸಂತಸಪಟ್ಟರು. ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ನಿರ್ಣಾಯಕರಾಗಿ ಭಾಗವಹಿಸಿ ಸಹಕರಿಸಿದರು. ಶಾಲಾ ಮುಖ್ಯಗುರು ಸುಬ್ಬಯ್ಯ.ವೈ.ಬಿ ಮಕ್ಕಳ ಚಟುವಟಿಕೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಭುವನೇಶ್ವರ.ಪಿ ಮಕ್ಕಳ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸ್ಕೌಟ್ಸ್ ಶಿಕ್ಷಕ ಶಿವಪ್ರಸಾದ್ ಜಿ ಕಾರ್ಯಕ್ರಮ ಸಂಘಟಿಸಿದರು.