Ad Widget

ಕವನ : ಬದುಕಿನ ಹಾದಿ

ಸಾವಿನವರೆಗೂ ಸಾಗುವ ದಾರಿ, ಕೊನೆಯಾಗುವುದು ತೀರವ ಸೇರಿ…
ತಿಳಿದರೂ ತಿಳಿಯದೇ ಹೋದರೂ ಕೂಡ ತಿಳಿಯಲೆಬೇಕು ಬದುಕಿನ ಹಾದಿ, ಗುರಿ ಸೇರುವ ದಾರಿ…
ನೀನು ಯಾರು ಎಂಬ ನಿಜವು ತಿಳಿಯದು ಯಾರಿಗೂ ನಿನ್ನನ್ನು ಹೊರತು, ನಿನ್ನ ಮನಸ್ಸನು ಹೊರತು…
ಇತರರ ಬದುಕಿನ ಜೊತೆಗೆ ನೀನು ನಿನ್ನಯ ಬದುಕನು ಹೋಲಿಸಬೇಡ,
ನಿನ್ನಯ ಬದುಕಿನ ದಾರಿಯೇ ಬೇರೆ, ಇತರರ ಬದುಕಿನ ದಾರಿಯೇ ಬೇರೆ…
ಇಲ್ಲಿ ಯಾರೂ ಶಾಶ್ವತವಲ್ಲ, ನೀನು ಕೂಡ ಶಾಶ್ವತವಲ್ಲ…
ನಿನ್ನ ಉಸಿರು ನಿಂತು ಹೋದರೂ ಕೂಡ ಹೆಸರು ಶಾಶ್ವತವಾಗಿರಬೇಕು, ಇಲ್ಲಿ ಎಂದಿಗೂ ಶಾಶ್ವತವಾಗಿರಬೇಕು…

. . . . .

✍ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!