

ಇತಿಹಾದ ಪ್ರಸಿದ್ಧ ಕಂದ್ರಪ್ಪಾಡಿ ರಾಜ್ಯದೈವ ಹಾಗೂ ಪುರುಷ ದೈವ ದೈವಸ್ಥಾನದಲ್ಲಿ ಜಾತ್ರಮಹೋತ್ಸವಕ್ಕೆ ಫೆ. 10 ರಂದು ಮುಹೂರ್ತ ನಡೆಯಿತು. ಕಂಚುಕಲ್ಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ಜಾತ್ರೆಗೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಫೆ. 10 ರಿಂದ ಜಾತ್ರೆ ನಡೆದು ಧ್ವಜಾರೋಹಣ ನಡೆಯುವವರೆಗೆ ದೈವಸ್ಥಾನದ ವ್ಯಾಪ್ತಿಗೊಳಪಟ್ಟ ಮನೆಗಳಲ್ಲಿ ಯಾವುದೇ ಶುಭಕಾರ್ಯ ನಡೆಸುವಂತಿಲ್ಲ ಎಂಬ ಧಾರ್ಮಿಕ ಕಟ್ಟುಪಾಡು ಇಲ್ಲಿ ನಡೆದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ, ವೆಂಕಟ್ ವಳಲಂಬೆ, ಕಿಶೋರ್ ಕುಮಾರ್ ಅಂಬೆಕಲ್ಲು, ಕಿಶೋರ್ ಕುಮಾರ್ ಬೊಮ್ಮದೇರೆ, ಉದಯಕುಮಾರ್ ಡಿ.ಆರ್. ಪ್ರೀತಂ ಮುಂಡೋಡಿ, ಪದ್ಮನಾಭ ಮೀನಾಜೆ, ಹಾಗೂ ಪರಿಚಾರಕರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.