ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಅಂಗವಾಗಿ ಫೆ.8ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿದ್ದು, ರಾತ್ರಿ ಸಭಾ ಕಾರ್ಯಕ್ರಮ ನಡೆಯಿತು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್ ಎನ್ ಮನ್ಮಥ, ದ.ಕ.ಜಿಲ್ಲಾ ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರು, ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ರಾಮಚಂದ್ರ ಪಲ್ಲತ್ತಡ್ಕ, ಕೃಷ್ಣ ಪ್ರಸಾದ್ ಮಡ್ತಿಲ,ಯುವಶಕ್ತಿ ಐವರ್ನಾಡು ಇದರ ಗೌರವಾಧ್ಯಕ್ಷ ದಿನೇಶ್ ಮಡ್ತಿಲ, ಗೆಳೆಯರ ಬಳಗ ದೇರಾಜೆ ಇದರ ಅಧ್ಯಕ್ಷ ನಂದಕುಮಾರ್ ಬಿ., ಎ.ಪಿ.ಎಂ.ಸಿ. ಅಧ್ಯಕ್ಷ ನವೀನ್ ಸಾರಕರೆ, ಕರುಣಾಕರ ಗೌಡ ಬರಮೇಲು, ಹರೀಶ್ ರಾವ್ ಉದ್ದಂಪ್ಪಾಡಿ, ರಾಜಾರಾಮ ರಾವ್ ಉದ್ದಂಪ್ಪಾಡಿ, ಕೆ ಕರಿಯಪ್ಪ ಕೋಡ್ತೀಲು, ದೇವಿದಾಸ ಕೆ.ಕತ್ಲಡ್ಕ, ಕೆ. ದಾಸಪ್ಪ ಗೌಡ ಕೋಡ್ತೀಲು, ಕೆ. ವಾಮನ ಗೌಡ ಕೋಂದ್ರಮಜಲು, ದಯಾನಂದ ಸಿ.ಎಸ್.ಚೆಮ್ನೂರು ಉಪಸ್ಥಿತರಿದ್ದರು.