ಕೈಗಾರಿಕೀಕರಣದ ಈ ಸಂದರ್ಭದಲ್ಲಿ ನಮ್ಮ ಹಿರಿಯರು ಹಾಡುತ್ತಿದ್ದ ಪಾಡ್ದನಗಳು ಇಂದು ಸಮಾಜದಿಂದ ಮರೆಯಾಗುತ್ತಾ ಇದೆ. ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ನಾವೆಲ್ಲ ಕೈ ಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಾಪಿತಗೊಂಡ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇಂದು ಅರ್ಥಪೂರ್ಣವಾಗಿ ಉದ್ಘಾಟನೆಗೊಂಡಿದೆ. ಎಂದು ಸ.ಪ.ಪೂ. ಕಾಲೇಜು ಪಂಜದ ಪ್ರಭಾರ ಪ್ರಾಂಶುಪಾಲ ಶ್ರೀ ವೆಂಕಪ್ಪ ಕೇನಾಜೆ ಹೇಳಿದರು. ಅವರು ಜ.21ರಂದು ಕಡ್ಲಾರುವಿನಲ್ಲಿ ನಡೆದ ಜಲಶ್ರೀ ಪ್ರತಿಷ್ಠಾನ ಕಡ್ಲಾರು, ವಾಲ್ತಾಜೆ ಇದರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹವ್ಯಾಸಿ ಬರಹಗಾರ ಮತ್ತು ನಿವೃತ್ತ ಶಿಕ್ಷಕರಾದ ಕುಶಾಲಪ್ಪ ಗೌಡ ರುದ್ರಚಾಮುಂಡಿ, ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ರಮೇಶ್ ಮೆಟ್ಟಿನಡ್ಕ ಮತ್ತು ಹಿರಿಯ ದೈವ ನರ್ತಕ ವಾಸು ಪರವ ಕಂದ್ರಪ್ಪಾಡಿ ದೀಪ ಬೆಳಗಿಸಿ ಕ್ರಮವಾಗಿ ಕವಿರಾಜಮಾರ್ಗ ಕಾವ್ಯವಾಚನ, ರಂಗಗೀತೆ ಗಾಯನ, ಮತ್ತು ಪಾಡ್ದನ ಹಾಡುವುದರ ಮೂಲಕ ಉದ್ಘಾಟಿಸಿದಾಗ ಮುಖ್ಯ ಅತಿಥಿಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿಅಧ್ಯಕ್ಷರಾಗಿರುವ ನಿತ್ಯಾನಂದ ಮುಂಡೋಡಿ ಮತ್ತು ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಗುತ್ತಿಗಾರು ಇದರ ಮೊಕ್ತೇಸರರಾಗಿರುವ ವೆಂಕಟ್ ವಳಲಂಬೆ ಶಂಖಧ್ವನಿಯೊಂದಿಗೆ ವಿಭಿನ್ನವಾಗಿ ಜಲಶ್ರೀ ಪ್ರತಿಷ್ಠಾನಕ್ಕೆ ಚಾಲನೆ ಕೊಟ್ಟರು.
ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ಭವಾನಿಶಂಕರ ಮುಂಡೋಡಿ, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಗುತ್ತಿಗಾರು ಇದರ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಯಶೋದ ಬಾಳೆಗುಡ್ಡೆ, ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ಸ.ಕಿ.ಪ್ರಾ ಶಾಲೆ ವಾಲ್ತಾಜೆ ಇಲ್ಲಿನ ವಿಧ್ಯಾರ್ಥಿಗಳಾದ ಹಿತೇಶ್ ಮೀನಾಜೆ, ಚಂಭಾಶ್ರೀ ಕಡೋಡಿ, ಯಜ್ಞಶ್ರೀ ಬಳ್ಕಜೆ, ಹರ್ಷಿಣಿ ಕೊರತ್ಯಡ್ಕ ಪ್ರಾರ್ಥನೆ ಹಾಡಿದರು. ಪ್ರತಿಷ್ಠಾನದ ಅಧ್ಯಕ್ಷ ನಿರಂಜನ ಕಡ್ಲಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಶರತ್ ಮರ್ಗಿಲಡ್ಕ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರತೀಕ್ ಆಚಾರ್ಯ ಕಂದ್ರಪ್ಪಾಡಿ ವಂದಿಸಿದರು. ಗೌರವ ಸಲಹೆಗಾರ ಪ್ರವೀಣ ಕಾಟೂರು ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಧನಂಜಯ ಕಡ್ಲಾರು, ರಕ್ಷಿತ್ ಕಡ್ಲಾರು, ಕುಸುಮಾಧರ ಕೊಂಬೆಟ್ಟು, ಪ್ರಮೀಳಾ ಕಡ್ಲಾರು ಮತ್ತು ಯುವ ಸೇವಾ ಸಂಘ ವಾಲ್ತಾಜೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Friday
- November 22nd, 2024