ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ರವರು ಫೆ.04 ರಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಅಣೆಕಟ್ಟು ನಿರ್ಮಾಣ, ಮರಕತ – ಉಜಿರಡ್ಕ ರಸ್ತೆ ಕಾಂಕ್ರೀಟೀಕರಣ, ನಡುಗಲ್ಲು – ಕಲ್ಲಾಜೆ ರಸ್ತೆ ಕಾಂಕ್ರೀಟೀಕರಣ, ನಡುಗಲ್ಲು – ಚಾರ್ಮತ – ಉತ್ರಂಬೆ ಭಾಗದ ರಸ್ತೆ ಕಾಂಕ್ರೀಟೀಕರಣ, ಹಾಲೆಮಜಲು – ಕುಳ್ಳಂಪಾಡಿ – ಚಾರ್ಮತ ರಸ್ತೆ ಕಾಂಕ್ರೀಟೀಕರಣ, ಹಾಲೆಮಜಲು – ಪಂಜಿಪಳ್ಳ ರಸ್ತೆ ಕಾಂಕ್ರೀಟೀಕರಣ, ಹಾಲೆಮಜಲು – ಬೀರ್ನಕಜೆ ರಸ್ತೆ ಕಾಂಕ್ರೀಟೀಕರಣ, ಹಾಲೆಮಜಲು – ಚತ್ರಪ್ಪಾಡಿ (ಎಸ್.ಸಿ ಕಾಲನಿ ರಸ್ತೆ) ಕಾಂಕ್ರೀಟೀಕರಣ ಸೇರಿದಂತೆ ಒಟ್ಟು 7 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ನೆಲ್ಲಿಪುಣಿ – ವಲ್ಪಾರೆ ಸೇತುವೆ ಉದ್ಘಾಟನೆಯನ್ನು ನೆರವೇರಿಸಿದರು.
ಆ ನಂತರ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ, ಮಾಜಿ ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ವೆಂಕಟ್ ದಂಬೆಕೋಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಪ್ರಮುಖರಾದ ಕೇಶವ ಭಟ್ ಮುಳಿಯ, ಗುತ್ತಿಗಾರು ಗ್ರಾಮ ಪಂಚಾಯತ್ ಅದ್ಯಕ್ಷರಾದ ರೇವತಿ ಆಚಳ್ಳಿ ಹಾಗೂ ಉಪಾಧ್ಯಕ್ಷರಾದ ಪ್ರಮೀಳಾ ಭಾಸ್ಕರ ಎರ್ದಡ್ಕ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಮಾವಿನಕಟ್ಟೆ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಹೇಮಂತ್, ತಾಲೂಕು ಬಿಜೆಪಿ ಎಸ್.ಸಿ ಮೋರ್ಚಾದ ಅಧ್ಯಕ್ಷರಾದ ಅಚ್ಯುತ ಗುತ್ತಿಗಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮಪಂಚಾಯತ್ ಸದಸ್ಯರಾದ ವಿಜಯಕುಮಾರ್ ಚಾರ್ಮತ ಸ್ವಾಗತಿಸಿ, ಹರಿಶ್ಚಂದ್ರ ಕುಳ್ಳಂಪಾಡಿ ಧನ್ಯವಾದ ಸಮರ್ಪಿಸಿದರು. ಚಂದ್ರಶೇಖರ ಬಾಳುಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇಶರಾಜ್ ಅಂಜೇರಿ ಕಾರ್ಯಕ್ರಮ ನಿರೂಪಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ