Ad Widget

ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನ್ನಿಧ್ಯದಲ್ಲಿ ವಾರ್ಷಿಕ ಕೋಲೋತ್ಸವ, ಸಾಧಕರಿಗೆ ಸನ್ಮಾನ

ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಘಂಟೆ ತೆಂಬೆರೆಯಲ್ಲಿ ಶ್ರೀ ಕೊರಗಜ್ಜ ದೈವದ ಕೋಲೋತ್ಸವವು ಫೆ.03 ಗುರುವಾರದಂದು ನಡೆಯಿತು.

. . . . . . . . .

ವಾರ್ಷಿಕ ಕೋಲೋತ್ಸವದ ಅಂಗವಾಗಿ ಸಂಜೆ ಭಜನಾ ಸಂಕೀರ್ತಣೆ ನಡೆದು ನಂತರ ಕಲ್ಲುರ್ಟಿ-ಮಂತ್ರದೇವತೆ ಹಾಗೂ ಗುಳಿಗನಿಗೆ ಪರ್ವ ಮತ್ತು ಕಲ್ಲುರ್ಟಿ ದರ್ಶನ ಸೇವೆ ನಡೆಯಿತು.

. . . . . . .

ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಿನ್ನಿಮಜಲು ಹೇಮಂತ್ ಕುಲಾಲ್ ರವರ ಗುರುಗಳಾದ ದೈವಪಾತ್ರಿ ಕೃಷ್ಣಪೂಜಾರಿ ಹಳೆಯಂಗಡಿಯವರಿಗೆ ಹೇಮಂತ್ ಕುಲಾಲ್ ರವರು ಗುರುವಂದನೆ ಸಲ್ಲಿಸಿದರು. ನಂತರ ಸಾಧಕರಾದ ಬಾಬು ಮೂಲ್ಯ ಕೊಂದಲ್ಕಾನ, ಉಮೇಶ್ ಶೆಟ್ಟಿ ಮಚ್ಚಾರಗುತ್ತು ಕಟೀಲು, ಕೃಷ್ಣಪ್ಪ ಮೂಲ್ಯ ಕೋಡಿಮನೆ ನೆಟ್ಟಾರು, ದೇರಣ್ಣ ಗೌಡ ಚಾವಡಿಬಾಗಿಲು ನೆಟ್ಟಾರು, ಶರತ್ ಮಡಿವಾಳ, ವಿಠಲ್ ದಾಸ್ ನ್ಯೂ ಕಾಮಧೇನು, ಎ.ಕೆ.ಮಣಿಯಾಣಿ ಬೆಳ್ಳಾರೆ, ಪ್ರಕಾಶ್ ನೆಟ್ಟಾರು ಇವರುಗಳನ್ನು ಸನ್ಮಾನಿಸಲಾಯಿತು. ಮಧುಕುಮಾರ್ ಮಣಿಮಜಲು ಕಾರ್ಯಕ್ರಮ ನಿರೂಪಿಸಿದರು. ನಂತರ ಅನ್ನದಾನ ನಡೆಯಿತು. ಆ ಬಳಿಕ ಶ್ರೀ ಕೊರಗಜ್ಜ ದೈವದ ಕೋಲ ನಡೆದು ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ಕಿನ್ನಿಮಜಲು ಮನೆಯವರಾದ ಶ್ರೀಮತಿ ಪರಮೇಶ್ವರಿ ಕೃಷ್ಣಪ್ಪ ಮೂಲ್ಯ ಕಿನ್ನಿಮಜಲು, ಹೇಮಂತ್ ಕುಲಾಲ್, ಮನೋಜ್ ಕುಲಾಲ್ ಹಾಗೂ ಕುಟುಂಬಸ್ಥರು, ಊರ-ಪರವೂರ ಭಗವದ್ಭಕ್ತರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading