Ad Widget

ಕಡಬ : ಪಂಚಲಿಂಗೇಶ್ವರ ಕೂಲಿಂಗ್ ಸೊಲ್ಯೂಷನ್ ಶುಭಾರಂಭ

ಕಡಬ ಪಂಜ ಮುಖ್ಯರಸ್ತೆಯಲ್ಲಿರುವ ಓಂಕಾರ ಸಂಕೀರ್ಣದಲ್ಲಿ ಪಂಚಲಿಂಗೇಶ್ವರ ಕೂಲಿಂಗ್ ಸೊಲ್ಯೂಷನ್ ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕರು, ವಿದ್ಯಾಭಾರತಿ ಕರ್ನಾಟಕ ರಾಜ್ಯದ ನೈತಿಕ ಆಧ್ಯಾತ್ಮಿಕ ಶಿಕ್ಷಣ ಪ್ರಮುಖರು ಆಗಿರುವ ಎಂ. ವೆಂಕಟ್ರಮಣ ರಾವ್, ಗುರುಪ್ರಸಾದ್ ತೋಟ , ಸಂಕೀರ್ಣ ಮಾಲಕರಾದ ಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ಎಲ್ಲಾ ರೀತಿಯ ಎ.ಸಿ, ಎಲ್ಲಾ ಕಂಪನಿ...

ಅರಂತೋಡು : ಜೇನುಕೃಷಿ ತರಬೇತಿ ಕಾರ್ಯಕ್ರಮ

ತೋಟಗಾರಿಕಾ ಇಲಾಖೆ ಸುಳ್ಯ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಂತೋಡು ಇದರ ಸಹಯೋಗದೊಂದಿಗೆ ಮಧುವನ ಹಾಗೂ ಜೇನು ಸಾಕಾಣಿಕಾ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಜೇನು ಕೃಷಿ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಅರಂತೋಡು ಸಹಕಾರಿ ಸಂಘದ ಸಿರಿಸೌಧ ಸಭಾಭವನದಲ್ಲಿ ಅ.21 ನಡೆಯಿತು.ಕಾರ್ಯಕ್ರಮವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ...
Ad Widget

ನೆಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ ತರಗತಿಗೆ ಅಡಚಣೆ: ಅಧಿಕಾರಿಗಳಿಗೆ ದೂರು ನೀಡಿದ ಕ್ಯಾಂಪಸ್ ಫ್ರಂಟ್

ಶಾಲಾ ಕಾಲೇಜುಗಳ ತರಗತಿಗಳು ಆನ್ಲೈನ್ ಮುಖಾಂತರ ನಡೆಯುತ್ತಿದ್ದು, ಸುಳ್ಯದ ಹಲವು ಗ್ರಾಮೀಣ ಪ್ರದೇಶಗಳಲ್ಲಿ (ಬಾಳುಗೋಡು, ಪೆರುವಾಜೆ) ನೆಟ್ವರ್ಕ್ ಸಮಸ್ಯೆಯಾಗುತ್ತಿದ್ದು, ಇದನ್ನು ಶೀಘ್ರ ಪರಿಹರಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಸುಳ್ಯ ಏರಿಯಾ ಸಮಿತಿ ನಿಯೋಗವು ತಹಶಿಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಪ್ರತಿಯೊಬ್ಬರೂ ಕಡ್ಡಾಯವಾಗಿ ಆನ್ಲೈನ್ ತರಗತಿಗಳಿಗೆ ಹಾಜರಾಗಬೇಕು. ಇಲ್ಲದಿದ್ದರೆ ಪರೀಕ್ಷಾ ಸಮಯದಲ್ಲಿ...

ಶೈಖುನಾ ಅಬೂಬಕ್ಕರ್ ಉಸ್ತಾದ್ ಆಂಡ್ ನೇರ್ಚೆ

ಶೈಖುನಾ ಅಬೂಬಕ್ಕರ್ ಉಸ್ತಾದ್ ಆಂಡ್ ನೇರ್ಚೆವಿಟ್ಲ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಇದರ ಸ್ಥಾಪಕ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಪ್ರಥಮ ಆಂಡ್ ನೇರ್ಚೆ ದಾರುನ್ನಜಾತ್ತ್ ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮದ ಮೂಲಕ ಜರಗಿತು.ಬೆಳಿಗ್ಗೆ 10.30 ಕ್ಕೆ ಧ್ವಜಾರೋಹಣ ದಾರುನ್ನ ಜಾತ್ತ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಹು ಮಹ್ಮೂದುಲ್ ಫೈಝಿ (ವಾಲೆಮುಂಡೋವು) ನಿರ್ವಹಿಸಿದರು. 10.45 ಕ್ಕೆ...

*ಶೈಖುನಾ ಅಬೂಬಕ್ಕರ್* *ಉಸ್ತಾದ್ ಆಂಡ್ ನೇರ್ಚೆ* ವಿಟ್ಲ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಇದರ ಸ್ಥಾಪಕ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಪ್ರಥಮ ಆಂಡ್ ನೇರ್ಚೆ ದಾರುನ್ನಜಾತ್ತ್ ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮದ ಮೂಲಕ ಜರಗಿತು. ಬೆಳಿಗ್ಗೆ 10.30 ಕ್ಕೆ ಧ್ವಜಾರೋಹಣ ದಾರುನ್ನ ಜಾತ್ತ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಹು ಮಹ್ಮೂದುಲ್ ಫೈಝಿ (ವಾಲೆಮುಂಡೋವು) ನಿರ್ವಹಿಸಿದರು.10.45...

ಅ.27 – ಸುಬ್ರಹ್ಮಣ್ಯದಲ್ಲಿ ಎಬಿವಿಪಿ ಅಭ್ಯಾಸ ವರ್ಗ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ಘಟಕದ ವತಿಯಿಂದ ನಗರ ಅಭ್ಯಾಸ ವರ್ಗ ಅ.27 ರಂದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಅ.23 : ಬಳ್ಪದಲ್ಲಿ ತ್ರಿಶೂಲಿನಿ ಎಲೆಕ್ಟ್ರಿಕಲ್ಸ್ ಶುಭಾರಂಭ

ಬಳ್ಪ ಮುಖ್ಯ ರಸ್ತೆಯಲ್ಲಿರುವ ಅಜಿತ್ ರಿಂಗ್ ವರ್ಕ್ಸ್ ಹತ್ತಿರ ಪ್ರವೀಣ್ ಮಾವಿನಗೊಡ್ಲುರವರ ಮಾಲಕತ್ವದ ತ್ರಿಶೂಲಿನಿ ಎಲೆಕ್ಟ್ರಿಕಲ್ಸ್ ಅ.23 ರಂದು ಶುಭಾರಂಭಗೊಳ್ಳಲಿದೆ.ಇಲ್ಲಿ ಎಲೆಕ್ಟ್ರಿಕಲ್ ವಯರಿಂಗ್, ಎಲೆಕ್ಟ್ರಿಕಲ್ ಉಪಕರಣಗಳ ದುರಸ್ತಿ ಮತ್ತು ರಿವೈಂಡಿಂಗ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಹಾಗೂ ಇನ್ ವರ್ಟರ್ ಅಳವಡಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

ಸುಳ್ಯ : ಶಾರದೋತ್ಸವಕ್ಕೆ ಚಾಲನೆ – ಸರಳ ಕಾರ್ಯಕ್ರಮ, ಇಂದು ಸಂಜೆ ವಿಸರ್ಜನೆ

ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ವತಿಯಿಂದ ಸರಳ ಶಾರದೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಶಾರದಾ ದೇವಿಯ ಮೆರವಣಿಗೆ ಹಾಗೂ ಪ್ರತಿಷ್ಟಾಪನೆ ಕಾರ್ಯಕ್ರಮ ಇಂದು ನಡೆಯಿತು. ಒಂದು ದಿನಕ್ಕೆ ಸೀಮಿತಗೊಂಡಿರುವ ಈ ಬಾರಿಯ ಶಾರದೋತ್ಸವ ಇಂದು ಸಂಜೆ ಶಾರದ ವಿಸರ್ಜನೆ ಯೊಂದಿಗೆ ಸಮಾಪನಗೊಳ್ಳಲಿದೆ.

ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ – ಅ.31 ರಂದು ಪೂರ್ವಭಾವಿ ಸಭೆ

ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ. 2021 ಫೆಬ್ರವರಿ 24 ರಿಂದ 26 ತನಕ ನಡೆಯುವ ಶುಭಮುಹೂರ್ತದಲ್ಲಿ ಪುನರ್ ಪ್ರತಿಷ್ಠಾ- ಬ್ರಹ್ಮಕಲಶೋತ್ಸವದ ಕಾರ್ಯಕ್ರಮ ಜರುಗಲಿದೆ. ಇದರ ಸಲುವಾಗಿ ಆಯಾ ವಿಭಾಗದ ನೂತನ ಸಮಿತಿ ರಚನೆಯ ಪೂರ್ವಭಾವಿ ಸಭೆಯನ್ನು ಇದೇ ಬರುವ ಅ.31 ರಂದು ನಡೆಯಲಿದೆ. ಈ ಸಭೆಯಲ್ಲಿ ಊರ-ಪರವೂರ ಭಕ್ತಾಭಿಮಾನಿಗಳು ಹಾಗೂ...

ಅ.23 : ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ತೆನೆ ತುಂಬಿಸುವ ಕಾರ್ಯಕ್ರಮ

ಕಳಂಜದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ತೆನೆ (ಕದಿರು) ತುಂಬಿಸುವ ಕಾರ್ಯಕ್ರಮವು ಅ. 23 ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಸರ್ಕಾರಿ ನಿಯಮದನ್ವಯ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿಕೊಂಡು ಭಾಗವಹಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Loading posts...

All posts loaded

No more posts

error: Content is protected !!