- Tuesday
- April 1st, 2025

ಸುಳ್ಯ ಆಟೋ ಚಾಲಕ ಯೂನಿಯನ್ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಟೋ ನಿಲ್ದಾಣದಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು.ಪುರೋಹಿತ ಬ್ರಹ್ಮ ಶ್ರೀ ನಾಗರಾಜ ಭಟ್ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು,ಸದಸ್ಯರುಗಳು, ಉಪಸ್ಥಿತರಿದ್ದರು.

ಪಂಜದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಹತ್ತಿರ ಇರುವ ಶ್ರೀಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಪುರುಷೋತ್ತಮ ಎರ್ಮಾಯಿಲ್ ಮಾಲಕತ್ವದ ಸ್ಪರ್ಶ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯೆನ್ಸಸ್ ಮಾರಾಟ ಮಳಿಗೆಯು ಅ.23 ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಹಿರಿಯ ಧಾರ್ಮಿಕ ಮುಂದಾಳು ಹಾಗೂ ಮಧ್ಯಸ್ಥರಾದ ಶ್ರೀ ತಿಮ್ಮಪ್ಪ ಗೌಡ ಪುತ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಂಜ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಶ್ರೀ...

ಬಳ್ಪ ಮುಖ್ಯ ರಸ್ತೆಯಲ್ಲಿರುವ ಅಜಿತ್ ರಿಂಗ್ ವರ್ಕ್ಸ್ ಹತ್ತಿರ ಪ್ರವೀಣ್ ಮಾವಿನಗೊಡ್ಲುರವರ ಮಾಲಕತ್ವದ ತ್ರಿಶೂಲಿನಿ ಎಲೆಕ್ಟ್ರಿಕಲ್ಸ್ ಅ.23 ರಂದು ಗಣಹೋಮ ನಡೆದು ಶುಭಾರಂಭಗೊಂಡಿತು. ಇಲ್ಲಿ ಎಲೆಕ್ಟ್ರಿಕಲ್ ವಯರಿಂಗ್, ಎಲೆಕ್ಟ್ರಿಕಲ್ ಉಪಕರಣಗಳ ದುರಸ್ತಿ ಮತ್ತು ರಿವೈಂಡಿಂಗ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಹಾಗೂ ಇನ್ ವರ್ಟರ್ ಅಳವಡಿಸಿಕೊಡಲಾಗುವುದು ಎಂದು ಮಾಲಕರಾದ ಪ್ರವೀಣ್ ಮಾವಿನಗೊಡ್ಲು ತಿಳಿಸಿದ್ದಾರೆ.