- Friday
- April 4th, 2025

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ಘಟಕದ ವತಿಯಿಂದ ನಗರ ಅಭ್ಯಾಸ ವರ್ಗ ಅ.27 ರಂದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬಳ್ಪ ಮುಖ್ಯ ರಸ್ತೆಯಲ್ಲಿರುವ ಅಜಿತ್ ರಿಂಗ್ ವರ್ಕ್ಸ್ ಹತ್ತಿರ ಪ್ರವೀಣ್ ಮಾವಿನಗೊಡ್ಲುರವರ ಮಾಲಕತ್ವದ ತ್ರಿಶೂಲಿನಿ ಎಲೆಕ್ಟ್ರಿಕಲ್ಸ್ ಅ.23 ರಂದು ಶುಭಾರಂಭಗೊಳ್ಳಲಿದೆ.ಇಲ್ಲಿ ಎಲೆಕ್ಟ್ರಿಕಲ್ ವಯರಿಂಗ್, ಎಲೆಕ್ಟ್ರಿಕಲ್ ಉಪಕರಣಗಳ ದುರಸ್ತಿ ಮತ್ತು ರಿವೈಂಡಿಂಗ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಹಾಗೂ ಇನ್ ವರ್ಟರ್ ಅಳವಡಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ವತಿಯಿಂದ ಸರಳ ಶಾರದೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಶಾರದಾ ದೇವಿಯ ಮೆರವಣಿಗೆ ಹಾಗೂ ಪ್ರತಿಷ್ಟಾಪನೆ ಕಾರ್ಯಕ್ರಮ ಇಂದು ನಡೆಯಿತು. ಒಂದು ದಿನಕ್ಕೆ ಸೀಮಿತಗೊಂಡಿರುವ ಈ ಬಾರಿಯ ಶಾರದೋತ್ಸವ ಇಂದು ಸಂಜೆ ಶಾರದ ವಿಸರ್ಜನೆ ಯೊಂದಿಗೆ ಸಮಾಪನಗೊಳ್ಳಲಿದೆ.