ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮತ್ತು ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್ ಎಸ್ ಎಫ್. ಬ್ಲಡ್ ಸೈಬೋ ನೇತೃತ್ವದಲ್ಲಿ 199ನೇ ರಕ್ತದಾನ ಶಿಬಿರ ಕಾರ್ಯಕ್ರಮ ಇಂದು ಗಾಂಧಿನಗರ ಸುನ್ನಿ ಸೆಂಟರ್ ಮತ್ತು ಅಲ್ಅನ್ಸಾರ್ ಕಚೇರಿಯಲ್ಲಿ ನಡೆಯಿತು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನವನ್ನು ಮಾಡಿದರು.
ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಸಖಾಫಿ ಕೌನ್ಸಿಲ್ ಸಮಿತಿಯ ಉಪಾಧ್ಯಕ್ಷ ಬಶೀರ್ ಸಖಾಫಿ ಜಯನಗರ ದುವಾ ನೆರವೇರಿಸಿ ಉದ್ಘಾಟಿಸಿದರು.ಸಮಾರೋಪ ಸಮಾರಂಭದಲ್ಲಿ ತೌಸಿಫ್ ಸಹದಿ ಹರೇಕಳ ಪ್ರಾಸ್ತಾವಿಕ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಸ್ಎಸ್ಎಫ್ ಸಂಘಟನೆಯ ಬ್ಲಡ್ ಸೈಬೋ ಕಾರ್ಯಕ್ರಮದ ಕುರಿತು ಮಾಹಿತಿಯನ್ನು ನೀಡಿದರು.
ಸುಳ್ಯದ ವರ್ತಕರ ಸಂಘದ ಅಧ್ಯಕ್ಷ 109ನೇ ಬಾರಿ ರಕ್ತದಾನವನ್ನು ಮಾಡಿ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿರುವ ಪಿ ಬಿ ಸುಧಾಕರ ರೈ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಗರ ಪಂಚಾಯತ್ ಸದಸ್ಯರುಗಳಾದ ವೆಂಕಪ್ಪ ಗೌಡ, ಉಮ್ಮರ್ ಕೆಎಸ್, ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಪಕ್ಷದ ಅಧ್ಯಕ್ಷ ಅಬ್ದುಲ್ ಕಲಾಂ, ಜೋನ್ ಸಮಿತಿ ಅಧ್ಯಕ್ಷ ಅಯ್ಯೂಬ್ ಸಹದಿ, ಬ್ಲೆಡ್ ಸೈಬೋ ಜಿಲ್ಲಾ ನಾಯಕ ಅಬ್ದುಲ್ ಕರೀಂ ಕೆದಕ್ಕಾರ್, ರೆಡ್ ಕ್ರಾಸ್ ಸಂಸ್ಥೆಯ ಅಧಿಕಾರಿ ಪ್ರವೀಣ್ ಕಾರ್ಯಕ್ರಮದ ಕುರಿತು ಮಾತನಾಡಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಇಂಟೆಕ್ ಅಧ್ಯಕ್ಷ ಹಮೀದ್ ಕುತ್ತಮಟ್ಟೆ, ಬ್ಲಡ್ ಹೆಲ್ಪ್ಲೈನ್ ಸಂಘಟಕ ರಫೀಕ್ ಪಡು, ಕಾರ್ಯಕ್ರಮ ಆಯೋಜಕ ಸಮಿತಿಯ ಅಧ್ಯಕ್ಷ ಸಿದ್ದೀಕ್ ಕಟ್ಟೆ ಕಾರ್ಸ್, ರಾಜ್ಯ ಎಸ್ ವೈ ಎಸ್ ಸಂಘಟನೆಯ ನಾಯಕ ಅಬ್ದುಲ್ ಹಮೀದ್ ಬೀಜಕೊಚ್ಚಿ, ರಫೀಕ್ ಮಾಸ್ಟರ್, ಸೆಕ್ಟರ್ ಸಮಿತಿ ಅಧ್ಯಕ್ಷ ಅಮ್ಜದಿ, ಸಂಘಟನೆಯ ನಾಯಕರಾದ ಸಿದ್ದಿಕ್ ಗೂನಡ್ಕ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಅಬ್ದುಲ್ ಕಲಾಂ ಝೌಹರಿ, ಲತೀಫ್ ಅರ್ಲಡ್ಕ, ಸಮೀರ್ ಮೊಗರ್ಪಣೆ, ನ ಪಂ ಸದಸ್ಯ ರಿಯಾಜ್ ಕಟ್ಟೆ ಕಾರ್ಸ್, ಗಾಂಧಿನಗರ ಜಮಾತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಐ.ಇಸ್ಮಾಯಿಲ್ ಹಾಜಿ, ಅನ್ಸಾರ್ ಸಂಸ್ಥೆಯ ಅಧ್ಯಕ್ಷ ಹಾಜಿ ಶುಕೂರ್,ಫೈಝಲ್ ಕಟ್ಟೆಕಾರ್ಸ್, ಅತಾವುಲ್ಲಾ, ಡಿಎಚ್ ಸಮೀರ್ ಜಯನಗರ, ನೌಶಾದ್ ಕೆರೆಮೂಲೆ, ಮೊದಲಾದವರು ಉಪಸ್ಥಿತರಿದ್ದರು. ಕೆಜಿಎನ್ ಮಿತ್ತೂರಿನಲ್ಲಿ ನಡೆಯಲಿರುವ ಇನ್ನೂರನೇ ರಕ್ತದಾನ ಶಿಬಿರ ಯಶಸ್ವಿಗೊಳಿಸುವಂತೆ ನಾಯಕರುಗಳು ಕರೆನೀಡಿದರು. ಶಿಬಿರದಲ್ಲಿ ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಸಹಕರಿಸಿದರು. ಸಂಘಟನೆಯ ಕಾರ್ಯಕರ್ತರಾದ ಶಾಕಿರ್ ಮೊಗರ್ಪಣೆ, ಬಶೀರ್ ಕಲ್ಲುಮುಟ್ಲು ಮೊದಲಾದವರು ಸಹಕರಿಸಿದರು. ಸ್ವಭಾಹ್ ಸಖಾಫಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.